October 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ವಿಟ್ಲದ ಹೊರೈಝನ್ ಶಾಲೆಯಲ್ಲಿ ಮಿಲಾದ್ ಫೆಸ್ಟ್ ಬ್ರೀಝೇ ಮದೀನಾ.

 

ವಿಟ್ಲದಲ್ಲಿರುವ ಹೊರೈಝನ್ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿಗಳ ಮಿಲಾದ್ ಫೆಸ್ಟ್ ಬ್ರೀಝೇ ಮದೀನಾ ” ಕಾರ್ಯಕ್ರಮವು ಶಾಲೆಯ ಅಧ್ಯಕ್ಷ ಅಝೀಝ್ ಸನ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ವಿಟ್ಲ ಕೇಂದ್ರ ಜುಮಾ ಮಸೀದಿಯ ಖತೀಬ್ ದಾವೂದ್ ಹನೀಫಿ ದುವಾದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು, ಶಾಲಾ ಉಪಾಧ್ಯಕ್ಷ ವಿ.ಕೆ.ಎಂ. ಅಶ್ರಫ್, ಸಲಹೆಗಾರ ವಿ.ಎಚ್. ಅಶ್ರಫ್, ಕೋಶಾಧಿಕಾರಿ ಅಂದುಞಿ ಗಮಿ, ಕಾರ್ಯದರ್ಶಿ ನೋಟರಿ ಅಬೂಬಕರ್, ಜೊತೆ ಕಾರ್ಯದರ್ಶಿ ಇಕ್ಬಾಲ್ ಹಳೆಮನೆ, ಮುಖ್ಯ ಶಿಕ್ಷಕ ಮನಾಝಿರ್ ಮುಡಿಪು, ಮಸೀದಿಯ ಕೋಶಾಧಿಕಾರಿ ಶರೀಫ್ ಪೊನ್ನೋಟು, ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ, ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ಟ್ರಸ್ಟಿಗಳಾದ ಶೀತಲ್ ಇಕ್ಬಾಲ್, ಅಬ್ದುಲ್ ಹಮೀದ್ ಬದ್ರಿಯಾ, ಇಸಾಕ್ ಸಾಹೇಬ್ ವೇದಿಕೆಯಲ್ಲಿದ್ದರು.

ಈ ಸಂದರ್ಭ ವಿದ್ಯಾರ್ಥಿಗಳಿಂದ ವಿವಿಧ ಸ್ಪರ್ಧೆಗಳು, ಪ್ರವಾದಿ ಪ್ರೇಮದ ಹಾಡು, ಭಾಷಣಗಳು ಹಾಗೂ ವಿವಿಧ ಕಾರ್ಯಕ್ರಮಗಳು ನಡೆದುವು. ಸದರ್ ಉಮ್ಮರ್ ಸ‌ಅದಿ ಸ್ವಾಗತಿಸಿ, ಇಸ್ಮಾಯಿಲ್ ಹನೀಫಿ ವಂದಿಸಿದರು.  ಸ್ವಾದಿಕ್ ಸಖಾಫಿ ನಿರೂಪಿಸಿದರು.

You may also like

News

ಬೆಳ್ತಂಗಡಿಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ಯುವ ಸಂಸತ್ತು–2026

ಯುವ ಸಮುದಾಯ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ದೇಶದ ಸಂಸದೀಯ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಅರಿವು ಮೂಡಿಸುವ ಉದ್ದೇಶದಿಂದ ತಾಲೂಕು ಮಟ್ಟದ ಯುವ ಸಂಸತ್ತು–2026 ಕಾರ್ಯಕ್ರಮ ಅಕ್ಟೋಬರ್ 8ರಂದು
News

Father Muller Thumbay Campus welcomes Nursing & Allied Health Students

The Course Inauguration Ceremony of the 5th batch of B.Sc. Nursing of Father Muller Nursing College Thumbay (FMNCT) and the

You cannot copy content of this page