October 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕೊಂಕಣಿ ಸಾಹಿತ್ಯದಲ್ಲಿ ಸುವರ್ಣ ಪಯಣದ ಸಂಭ್ರಮ – ಡಾ. ಎಡ್ವರ್ಡ್ ನಜ್ರೆತ್ ರವರಿಗೆ ಸನ್ಮಾನ

ನಗರದ ಖ್ಯಾತ ಮೂಳೆ ರೋಗ ತಜ್ಞ ಹಾಗೂ ಮುಕ್ಕದ ಶ್ರೀನಿವಾಸ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿರುವ ಡಾ. ಎಡ್ವರ್ಡ್ ನಜ್ರೆತ್‌ರವರು ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ 50 ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಕರ್ನಾಟಕ ಕೊಂಕಣಿ ಲೇಖಕರ ಸಂಘವು ಆದಿತ್ಯವಾರ ಸಪ್ಟೆಂಬರ್ 15ರಂದು ನಗರದ ಸಂದೇಶ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

 

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಟ್ಯಾನಿ ಆಲ್ವಾರಿಸ್ ಮುಖ್ಯ ಅತಿಥಿಗಳಾಗಿದ್ದು, ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ವಂದನೀಯ ಡಾ. ಮೈಕಲ್ ಸಾಂತುಮಾಯೆರ್ ಅಧ್ಯಕ್ಷತೆ ವಹಿಸಿದ್ದರು.  ಕೊಂಕಣಿಯ ನಿಯತಕಾಲಿಕಗಳಲ್ಲಿ ಕಳೆದ 50 ವರ್ಷಗಳಿಂದ ಜನಸಾಮನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಆರೋಗ್ಯಕ್ಕೆ ಸಂಬಂಧಪಟ್ಟ ಲೇಖನಗಳನ್ನು ಮತ್ತು ಸಣ್ಣಕಥೆಗಳನ್ನು ಬರೆಯುತ್ತಿದ್ದರು.

ಡಾ. ಎಡ್ವರ್ಡ್ ನಜ್ರೆತ್‌ರವರ 5 ಸಣ್ಣಕತೆಗಳ ಸಂಗೃಹ, ಆರೋಗ್ಯದ ಕುರಿತಾದ 10 ಪುಸ್ತಕ ಮತ್ತು 2 ಕಾದಂಬರಿಗಳು ಪ್ರಕಟವಾಗಿವೆ.  ಅವರ ಸಾಹಿತ್ಯದ ಕುರಿತು ಹಿರಿಯ ಲೇಖಕ ಡೊಲ್ಫಿ ಲೋಬೊ ಮತ್ತು ಲೇಖಕಿ ಲವಿನಾ ಮಸ್ಕರೇನಸ್ (ಲವಿ, ಗಂಜಿಮಟ)ರವರು ಪ್ರಭಂದ ಮಂಡಿಸಿದರು. ಪ್ಲಾವಿಯಾ ಆಲ್ಬುಕರ್ಕ್‍ರವರು ಕೊಂಕಣಿ ಭಾಷೆಗೆ ಭಾಷಾಂತರಿಸಿದ ’ರೆಗಿಸ್ಥಾನಾಚೆಂ ಫುಲ್’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಕೊಂಕಣಿ ಲೇಖಕರ ಸಂಘದ ಸಂಚಾಲಕರಾಗಿರುವ ರಿಚ್ಚರ್ಡ್ ಮೊರಾಸ್ ಸ್ವಾಗತಿಸಿ, ಎಡ್ಮಂಡ್ ನೊರೊನ್ಹಾ ವಂದಿಸಿ, ಹೆನ್ರಿ ಮಸ್ಕರೇನಸ್ ಕಾರ್ಯಕ್ರಮವನ್ನು ನಿರೂಪಿಸಿದರು.

You may also like

News

ಬೆಳ್ತಂಗಡಿಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ಯುವ ಸಂಸತ್ತು–2026

ಯುವ ಸಮುದಾಯ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ದೇಶದ ಸಂಸದೀಯ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಅರಿವು ಮೂಡಿಸುವ ಉದ್ದೇಶದಿಂದ ತಾಲೂಕು ಮಟ್ಟದ ಯುವ ಸಂಸತ್ತು–2026 ಕಾರ್ಯಕ್ರಮ ಅಕ್ಟೋಬರ್ 8ರಂದು
News

Father Muller Thumbay Campus welcomes Nursing & Allied Health Students

The Course Inauguration Ceremony of the 5th batch of B.Sc. Nursing of Father Muller Nursing College Thumbay (FMNCT) and the

You cannot copy content of this page