May 16, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಅಲ್ಲಿಪಾದೆಯಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ಶಿಬಿರ

ಬಂಟ್ವಾಳ : ಸಂತ ಅಂತೋನಿಯವರ ದೇವಾಲಯ ಅಲ್ಲಿಪಾದೆ ಹಾಗೂ ಸ್ತ್ರೀ ಸಂಘಟನೆ ಅಲ್ಲಿಪಾದೆ ಘಟಕ ಮತ್ತು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಇದರ ಸಹಯೋಗದಲ್ಲಿ ಸ್ತ್ರೀ ಆಯೋಗ, ಅರೋಗ್ಯ ಆಯೋಗ ಮತ್ತು ಯುವ ಆಯೋಗ ಇವರ ಸಹಕಾರದೊಂದಿಗೆ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ಶಿಬಿರವು ಅಲ್ಲಿಪಾದೆ ಚರ್ಚ್ ಸೌಹಾರ್ದ ಸಭಾ ಭವನದಲ್ಲಿ ರವಿವಾರ ಸಪ್ಟಂಬರ್ 22ರಂದು ನಡೆಯುತು. ಶಿಬಿರವನ್ನು ಚರ್ಚ್ ಧರ್ಮಗುರು ವಂದನೀಯ ಫಾದರ್ ರೋಬರ್ಟ್ ಡಿಸೋಜ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆ ವೈದ್ಯರಾದ ಡಾ. ಜ್ಞಾನೇಶ್ವರಿ ಜಯರಾಮ್, ಡಾ. ಸೋನಿಯಾ ಕೆ. ಎಲ್. ಸಿಕ್ವೆರಾ, ಪ್ರಮುಖರಾದ ರಂಜನ್ ಎ.ವಿ., ಕ್ಲುನಿ ಕಾನ್ವೆಂಟ್ ನ ಸುಪೀರಿಯರ್ ಭಗಿನಿ ನಸಿಸ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ನವೀನ್ ಮೊರಸ್, ಕಾರ್ಯದರ್ಶಿ ಕಿರಣ್ ನೊರೊನ್ಹಾ ಹಾಗೂ ಆಯೋಗಗಳ ಸಂಯೋಜಕ ಜೋನ್ ವಾಲ್ಡರ್ ಮೊದಲಾದವರು ಉಪಸ್ಥಿತರಿದ್ದರು. ಅಲ್ಲಿಪಾದೆ ಸ್ತ್ರೀ ಸಂಘದ ಅಧ್ಯಕ್ಷೆ ಲವೀನಾ ಮೋರಸ್ ಸ್ವಾಗತಿಸಿ, ರೆನ್ನಿ ಫೆರ್ನಾಂಡಿಸ್ ವಂದಿಸಿದರು. ಕುಮಾರಿ ವೆನೆಸ್ಸಾ ಮೊರಸ್ ಕಾರ್ಯಕ್ರಮ ನಿರೂಪಿಸಿದರು.

 

You may also like

News

ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಮೂಲಭೂತ ಸೌಕರ್ಯ ಒದಗಿಸಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ MLC ಐವನ್ ಡಿಸೋಜ

ಕರಾವಳಿ ಕರ್ನಾಟಕದ ಜನರ ದಶಕಗಳ ಬೇಡಿಕೆಯಾಗಿರುವ ಹೈಕೋರ್ಟ್ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸುವ ಪ್ರಕ್ರಿಯೆಗೆ ವೇಗ ನೀಡುವ ನಿಟ್ಟಿನಲ್ಲಿ, ಹೋರಾಟ ಸಮಿತಿಯ ಸಂಚಾಲಕ ಹಾಗೂ ಶಾಸಕ MLC
News

ICYM BORIMAR ಸಂಘಟನೆಯಲ್ಲಿ ‘ಕುಟುಂಬ ರಾಜಕಾರಣ’?: ಯಾರಿಗೂ ತಿಳಿಸದೇ ಒಳಗಿಂದೊಳಗೆ ಚುನಾವಣೆ ನಡೆಸಿದ ಸಚೇತಕ! ಭುಗಿಲೆದ್ದ ಆಕ್ರೋಶ

ಮಂಗಳೂರು ಧರ್ಮಾಧ್ಯಕ್ಷರಿಗೆ ಲಿಖಿತ ದೂರು ನೀಡಿದ ಚರ್ಚ್ ಹಿಂದಿನ ಪಾಲನಾ ಸಮಿತಿ ಕ್ರೈಸ್ತ ಯುವಜನರ ಪ್ರತಿಷ್ಠಿತ ಸಂಘಟನೆಯಾದ ICYM ಬೊರಿಮಾರ್ (BORIMAR) ಘಟಕದಲ್ಲಿ ಸಚೇತಕನು (ANIMATOR) ಧರ್ಮಕ್ಷೇತ್ರದ

You cannot copy content of this page