November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಗ್ರಾಮ ಪಂಚಾಯತ್ ಪಿಡಿಓ ನೋಟಿಸಿಗೆ ಹೈಕೋರ್ಟ್ ತಡೆ – ಫಲಭರಿತ ತೆಂಗಿನ ಮರ ಕಡಿಯದಂತೆ ಆದೇಶ

ಬಂಟ್ವಾಳ : ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರಿಪಳ್ಳ ಎಂಬಲ್ಲಿ ಫ್ರಾನ್ಸಿಸ್ ವಾಸ್ ಎಂಬವರಿಗೆ ಸೇರಿದ್ದ ಫಲಭರಿತ ತೆಂಗಿನಮರವನ್ನು ಕಡಿಯುವಂತೆ ಪುದು ಗ್ರಾಮ ಪಂಚಾಯತ್ ಪಿಡಿಓ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿದೆ. ಅದೇ ಪಂಚಾಯತಿನ ಪ್ರಭಾವಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಸರಿಯಾಗಿ ಪರಿಶೀಲಿಸದೆ ಸಮೃದ್ಧ ಫಲಭರಿತ ತೆಂಗಿನ ಮರವನ್ನು ತಕ್ಷಣ ಕಡಿಯುವಂತೆ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಯವರ ಸೂಚನೆಯಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಾಸ್ ರವರಿಗೆ ನೋಟಿಸ್ ನೀಡಿದ್ದರು.

ಸದ್ರಿ ನೋಟಿಸನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಫ್ರಾನ್ಸಿಸ್ ವಾಸ್ ರವರ ಅರ್ಜಿಯನ್ನು ಬುಧವಾರ ವಿಚಾರಿಸಿದ ಜಸ್ಟಿಸ್ ಮಹಮ್ಮದ್ ನವಾಝ್ ರವರ ಪೀಠವು ಅರ್ಜಿಯನ್ನು ಪರಿಶೀಲಿಸಿ ಮರ ಕಡಿಯದಂತೆ ತಡೆಯಾಜ್ಞೆ ನೀಡಿದೆ. ಅರ್ಜಿದಾರರ ಪರವಾಗಿ ಬೆಂಗಳೂರಿನ ಆರ್. ಪಿ. ಡಿಸೋಜಾ ಅಸೋಸಿಯೇಟ್ಸ್ ನ ಯುವ ವಕೀಲ ಆರ್. ಪಿ. ಡಿಸೋಜಾರವರು ವಾದ ಮಂಡಿಸಿದರು.

You may also like

News

ಶಿರೂರು ಅಪಘಾತಕ್ಕೆ ಇಬ್ಬರು ಯುವಕರು ಬಲಿ

ಬೈಂದೂರು ತಾಲೂಕಿನ ಶಿರೂರಿನ ಇಂಡಿಯನ್ ಪೆಟ್ರೋಲ್ ಬಂಕ್ ಸಮೀಪ ನವಂಬರ್ 23ರಂದು ಸೋಮವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಉಪ್ಪುಂದದ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು
News

ನರ್ಸಿಂಗ್ ವೃತ್ತಿಪರರಿಗೆ ಡಿಜಿಟಲ್ ಸೇವೆಗಳ ಹೊಸ ದಾರಿ – ಮಂಗಳೂರಿನಲ್ಲಿ KSNC ಜಾಗೃತಿ ಕಾರ್ಯಕ್ರಮ

1,500ಕ್ಕೂ ಅಧಿಕ ಮಂದಿ ಭಾಗಿ – ನರ್ಸ್‌ಗಳ ಸೇವೆಯನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಶ್ಲಾಘನೆ ಮಂಗಳೂರು: ರೋಗಿಗಳ ಆರೈಕೆ, ನೋವು ನಿವಾರಣೆ ಮತ್ತು ಮಾನವೀಯ ಸೇವೆಯಲ್ಲಿ

You cannot copy content of this page