November 24, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ನಾರಾಯಣಗುರುಗಳ ಸಂದೇಶ ಯುವವಾಹಿನಿಗೆ ದಾರಿದೀಪ – ರಾಜೇಶ್ ಸುವರ್ಣ  

ಬಂಟ್ವಾಳ : 36 ವರ್ಷಗಳ ಸುಭದ್ರ ಇತಿಹಾಸ ಹೊಂದಿರುವ ಯುವವಾಹಿನಿ ಸಂಸ್ಥೆಗೆ ಬ್ರಹ್ಮಶ್ರೀ ನಾರಾಯಣಗುರುಗಳ‌ ತತ್ವ ಸಂದೇಶ ದಾರಿದೀಪವಾಗಿದೆ, ಗುರುತತ್ವವಾಹಿನಿ ಮೂಲಕ ನಿರಂತರವಾಗಿ ನಡೆಯುವ ಭಜನಾ ಸಂಕೀರ್ತನೆಯು ಯುವವಾಹಿನಿಯ ಯಶಸ್ಸಿನ ಮೆಟ್ಟಿಲಾಗಿದೆ  ಎಂದು ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ರಾಜೇಶ್ ಸುವರ್ಣ ತಿಳಿಸಿದರು.

ಅವರು ಅಕ್ಟೋಬರ್ 10ರಂದು ಗುರುವಾರ ಬಂಟ್ವಾಳ ತಾಲೂಕಿನ‌ ಪಲ್ಲಮಜಲು ರಾಜೇಂದ್ರ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 15ರಲ್ಲಿ ಗುರುಸಂದೇಶ ನೀಡಿದರು.

ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ, ಆರೋಗ್ಯ ನಿರ್ದೇಶಕ ಮಹೇಶ್ ಬೊಳ್ಳಾಯಿ, ಮಾಜಿ ಅಧ್ಯಕ್ಷರಾದ ರಾಮಚಂದ್ರ ಸುವರ್ಣ, ನಾಗೇಶ್ ಪೊನ್ನೋಡಿ, ಪ್ರೇಮನಾಥ್ ಕರ್ಕೇರ, ಸದಸ್ಯರಾದ, ಯತೀಶ್ ಬೊಳ್ಳಾಯಿ, ಹರೀಶ್ ಅಜೆಕಲ, ಯಶೋಧರ ಕಡಂಬಲ್ಕೆ, ನಯನಾ ಪಚ್ಚಿನಡ್ಕ, ಮಲ್ಲಿಕಾ ಪಚ್ಚಿನಡ್ಕ,ಮತ್ತಿತರರು ಉಪಸ್ಥಿತರಿದ್ದರು. ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾದ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.

You may also like

News

ನರ್ಸಿಂಗ್ ವೃತ್ತಿಪರರಿಗೆ ಡಿಜಿಟಲ್ ಸೇವೆಗಳ ಹೊಸ ದಾರಿ – ಮಂಗಳೂರಿನಲ್ಲಿ KSNC ಜಾಗೃತಿ ಕಾರ್ಯಕ್ರಮ

1,500ಕ್ಕೂ ಅಧಿಕ ಮಂದಿ ಭಾಗಿ – ನರ್ಸ್‌ಗಳ ಸೇವೆಯನ್ನು ಆರೋಗ್ಯ ಸಚಿವ ಯು.ಟಿ. ಖಾದರ್ ಶ್ಲಾಘನೆ ಮಂಗಳೂರು: ರೋಗಿಗಳ ಆರೈಕೆ, ನೋವು ನಿವಾರಣೆ ಮತ್ತು ಮಾನವೀಯ ಸೇವೆಯಲ್ಲಿ
News

Parents Urged to Make Faith the Foundation of Family Life at Mangalore Diocese DPP Meet

Awardees and Achievers Honoured for National, State and District-Level Excellence The Diocese of Mangalore, at its second Diocesan Pastoral Parishad

You cannot copy content of this page