August 28, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಶೌರ್ಯ ವಿಪತ್ತು ನಿರ್ವಹಣ ಘಟಕ ಶಂಬೂರ್ ಇದರ ಮಾಸಿಕ ಸಭೆ ಹಾಗೂ ಶ್ರಮದಾನ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣ  ಘಟಕ ಶಂಬೂರ್ ಇದರ ಮಾಸಿಕ ಸಭೆ ಹಾಗೂ ಶ್ರಮದಾನ ಅಕ್ಟೋಬರ್ 20ರಂದು ಜರುಗಿತು. ಮಾಸಿಕ ಸಭೆಯು ಶಂಭೂರು ಗ್ರಾಮದ ಬೈಪಾಡಿ ಕೃಷ್ಣಪ್ಪ ನಾಯ್ಕರವರ ಮನೆಯಲ್ಲಿ ವಲಯ ಮೇಲ್ವಿಚಾರಕಿ ಅಮಿತಾರವರ ಉಪಸ್ಥಿತಿಯಲ್ಲಿ ನಡೆಸಿ ಘಟಕದ ಜವಾಬ್ದಾರಿಯ ಬಗ್ಗೆ ಮೇಲ್ವಿಚಾರಕರು ಮಾಹಿತಿ ನೀಡಿದರು.

ತದನಂತರ ಘಟಕದ ಸದಸ್ಯರು ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇಡಿ ಗುರಿಯಿಂದ ನಾಟಿಯವರಿಗೆ ಮಾರ್ಗದ ಬದಿಯಲ್ಲಿ ಬೆಳೆದ ಬಲ್ಲೆ, ಗಿಡ ಗಂಟೆಗಳನ್ನು ಕಡಿದು ಸ್ವಚ್ಛತಾ ಕಾರ್ಯಕ್ರಮವನ್ನು ಮಾಡಲಾಯಿತು.

ಈ ಸಂದರ್ಭ ಜನಜಾಗೃತಿ ವಲಯ ಸದಸ್ಯ ಪುರುಷೋತ್ತಮ್, ಗ್ರಾಮ ಪಂಚಾಯತಿ ಸದಸ್ಯ ಪ್ರಕಾಶ್ ಎಂ. ಮಡಿಮುಗೇರು, ಘಟಕದ ಪ್ರತಿನಿಧಿ ಕೃಷ್ಣಪ್ಪ ನಾಯ್ಕ್, ಸಂಯೋಜಕಿ ಲಕ್ಷ್ಮೀ, ಘಟಕದ  ಸದಸ್ಯರುಗಳಾದ ವಾಮನ, ಸುರೇಶ್, ಹರೀಶ್, ಪ್ರಕಾಶ್, ಸನತ್, ಶಿವಶಂಕರ್, ಪ್ರೇಮಲತಾ, ಬಬಿತ, ಅಕ್ಕಮ್ಮ, ಗೀತಾ, ಶ್ರೀಮತಿ ಹಾಗೂ ಪುರುಷೋತ್ತಮ  ಉಪಸ್ಥಿತರಿದ್ದರು.

You may also like

News

CODP ಮಂಗಳೂರು ಹಾಗೂ ಕ್ರಾಸ್ ಸಂಸ್ಥೆ ಬೆಂಗಳೂರು ಇವರ ಸಹಯೋಗದಲ್ಲಿ ಸ್ಥಳೀಯ ಆಡಳಿತದಲ್ಲಿ ಮಹಿಳಾ ನಾಯಕತ್ವಕ್ಕೆ ತರಬೇತಿ

ಸ್ಥಳೀಯ ಆಡಳಿತದಲ್ಲಿ ಮಹಿಳೆಯರ ನಾಯಕತ್ವವನ್ನು ಬಲಪಡಿಸುವ ಉದ್ದೇಶದಿಂದ ಸಿಓಡಿಪಿ ಮಂಗಳೂರು ಹಾಗೂ ಕ್ರಾಸ್ ಸಂಸ್ಥೆ, ಬೆಂಗಳೂರು ಇವರ ಸಹಯೋಗದಲ್ಲಿ ಮಹಿಳಾ ಸಬಲೀಕರಣ ಯೋಜನೆಯಡಿ “ಸ್ಥಳೀಯ ಆಡಳಿತದಲ್ಲಿ ನಾಯಕತ್ವ”
News

ಮಿಲಾಗ್ರಿಸ್ ಸೊಸೈಟಿಯಿಂದ ಪಾನೀರ್ ಅನಾಥಾಶ್ರಮದ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತುಗಳ ನೆರವು

ಆಶ್ರಮಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ – ಜೆ. ಆರ್. ಲೋಬೊ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಕಾರವಾರ ಇದರ ಉರ್ವಾ ಶಾಖೆಯ ಆಶ್ರಯದಲ್ಲಿ

You cannot copy content of this page