August 28, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕರ್ನಾಟಕದ ಹೆಮ್ಮೆಯ KSRTC ಸಂಸ್ಥೆಗೆ ‘ರಾಷ್ಟ್ರೀಯ ಕಾರ್ಪೊರೇಟ್ ನಾಯಕತ್ವ ಚಾಣಕ್ಯ ಪ್ರಶಸ್ತಿ’

ಬೆಂಗಳೂರು: ಕರ್ನಾಟಕದ ಹೆಮ್ಮೆಯ KSRTC ಸಂಸ್ಥೆಗೆ ರಾಷ್ಟ್ರೀಯ ಕಾರ್ಪೊರೇಟ್ ನಾಯಕತ್ವ ಚಾಣಕ್ಯ ಪ್ರಶಸ್ತಿ ಲಭಿಸಿದೆ.

 

ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಾಹಿತಿ ಹಂಚಿಕೊಂಡಿದ್ದು, ನಿಗಮಕ್ಕೆ, ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ (PRCI) ಆಯೋಜಿಸಿದ 18ನೇ ವಿಶ್ಚ ಸಂವಹನ ಸಮ್ಮೇಳನ 2024 ರ ವರ್ಷದ ರಾಷ್ಟ್ರೀಯ ಕಾರ್ಪೊರೇಟ್ ನಾಯಕತ್ವ ಚಾಣಕ್ಯ ಪ್ರಶಸ್ತಿಯು ಲಭಿಸಿದೆ. KSRTCಯ ಕಾರ್ಮಿಕ ಸ್ನೇಹಿ, ಪ್ರಯಾಣಿಕ ಸ್ನೇಹಿ ಉಪಕ್ರಮಗಳಿಗೆ ಹಾಗೂ ವಿವಿಧ ಬಸ್ಸುಗಳ ಬ್ರ್ಯಾಂಡಿಂಗ್ ಕಾರ್ಯಕ್ಕೆ ಸದರಿ ಪ್ರಶಸ್ತಿಯು ಲಭಿಸಿರುತ್ತದೆ ಎಂದಿದೆ.

ಶ್ರೀಪಾದ್ ಯೆಸ್ಸೋ ನಾಯ್ಕ್, ರಾಜ್ಯ ಸಚಿವರು, ಭಾರತ ಸರ್ಕಾರ, ಇಂಧನ, ನವೀನ ಮತ್ತು ನವೀಕರಿಸಿದ ಇಂಧನ ಸಚಿವಾಲಯ, ಮತ್ತು 2024ನೇ ವರ್ಷದ ಮಿಸ್ ಗ್ಲೋಬಲ್ ಇಂಡಿಯಾ ಸ್ವೀಸೆಲ್ ಮರಿಯಾ ಫುರ್ಥಾಡೋ, PRCI ರಾಷ್ಟ್ರೀಯ ಅಧ್ಯಕ್ಷೆ ಗೀತಾ ಶಂಕರ್ ಅವರು ಮಂಗಳೂರು ನಗರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ KSRTCಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು ಎಂದಿದೆ.

 

ಮೈಸೂರು ನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ವೀರೇಶ್ ಹೆಚ್.ಟಿ., ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಮತ್ತು ಪುತ್ತೂರು ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಅಮಲಿಂಗಯ್ಯ ಬಿ. ಹೊಸಪೂಜಾರಿ ಅವರು ನಿಗಮದ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು ಎಂದು ತಿಳಿಸಿದೆ.

You may also like

News

ಕಾನ್ಪುರ ವಿಮಾನ ದುರಂತ – ಉಡುಪಿ ಮೂಲದ ತರಬೇತಿ ಪೈಲಟ್ ಅಭಿಷೇಕ್ ಪೂಜಾರಿ ಮೃತ್ಯು

ಉತ್ತರ ಪ್ರದೇಶದ ಕಾನ್ಪುರದಲ್ಲಿ ಖಾಸಗಿ ತರಬೇತಿ ವಿಮಾನ ಪತನಗೊಂಡು ಉಡುಪಿ ಜಿಲ್ಲೆಯ ಮೂಲದ ಯುವ ತರಬೇತಿ ಪೈಲಟ್ 22 ವರ್ಷ ಪ್ರಾಯದ ಅಭಿಷೇಕ್ ಪೂಜಾರಿ ಮೃತಪಟ್ಟಿರುವುದು ದೃಢಪಟ್ಟಿದೆ.
News

“ಕರಾವಳಿಗೆ ಹೈಕೋರ್ಟ್ ಸಂಚಾರಿ ಪೀಠ – ಸಮಿತಿ ರಚನೆಗೆ ಸಿಜೆ ಭರವಸೆ”

ಬೆಂಗಳೂರು: ಕರಾವಳಿ ಭಾಗದಲ್ಲಿ ಕರ್ನಾಟಕ ಹೈಕೋರ್ಟ್‌ನ ಸಂಚಾರಿ ಪೀಠ ಸ್ಥಾಪಿಸುವ ನಿಟ್ಟಿನಲ್ಲಿ ಸಮಿತಿ ರಚಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ವಿಭು

You cannot copy content of this page