September 5, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಶೌರ್ಯ ವಿಪತ್ತು ನಿರ್ವಹಣ  ಘಟಕ ಕಲ್ಲಡ್ಕ  ವತಿಯಿಂದ  ಶ್ರಮದಾನ ಸೇವೆ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣ  ಘಟಕ ಕಲ್ಲಡ್ಕ ಇದರ ವತಿಯಿಂದ ಶ್ರಮದಾನ ಸೇವಾ ಕಾರ್ಯಕ್ರಮ ದಶಂಬರ್ 1ರಂದು ಆದಿತ್ಯವಾರ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಕಲ್ಲಡ್ಕ ಕುದ್ರೆಬೆಟ್ಟು ಕಲ್ಲುರ್ಟಿ  ದೈವಸ್ಥಾನ ವಠಾರದಲ್ಲಿ ಜರಗಿತು.

ಕುದ್ರೆಬೆಟ್ಟು ಕಲ್ಲುರ್ಟಿ ದೈವಸ್ಥಾನದ ತಿಂಗಳ ಅಗೇಲು ಸೇವಾ ವ್ಯವಸ್ಥೆಯ ಕೊಠಡಿಗೆ ಪ್ರಕೃತಿ ವಿಕೋಪದಿಂದಾಗಿ ಸಮೀಪದ ಬರೇ ಜರಿದು ಬಿದ್ದು ಕೊಠಡಿಗೆ ಕೆಸರು ಮಣ್ಣು ತುಂಬಿತ್ತು. ಇದನ್ನು ತೆರವು ಮಾಡಲು ದೈವಸ್ಥಾನ ಸಮಿತಿ ಕಲ್ಲಡ್ಕ ಶೌರ್ಯ ವಿಪತ್ತು ಘಟಕಕ್ಕೆನೀಡಿದ ಮನವಿಗೆ ಸ್ಪಂದಿಸಿ ಘಟಕದ ಸದಸ್ಯರು  ಮಣ್ಣು ತೆರವು ಹಾಗೂ ದೈವಸ್ಥಾನದ ಪರಿಸರ ಸ್ವಚ್ಛ ಕಾರ್ಯ ಮಾಡಿದರು.

ಸ್ವಚ್ಛತಾ ಕಾರ್ಯಕ್ರಮದ ಸಂರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ, ಯೋಜನೆಯ ವಿಟ್ಲ ತಾಲೂಕು ಶೌರ್ಯ ವಿಪತ್ತು ಘಟಕದ ಕ್ಯಾಪ್ಟನ್ ಸುರೇಶ್ ಪೆರ್ನೆ, ಮಾಸ್ಟರ್ ದೀಪಕ್ ಅಳಿಕೆ,  ಜನಸಕ್ತಿ ಸೇವಾ ಟ್ರಸ್ಟ್ ಅಧ್ಯಕ್ಷ ಜಿನ್ನಪ್ಪ ಎಳ್ತಿಮಾರ, ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಧರ್ಮದ ಬಳ್ಳಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುಂದರ ಸಾಲಿಯಾನ್ ಮೊದಲದವರು ಭೇಟಿ ನೀಡಿ ಪ್ರೊತ್ಸಾಹಿಸಿದರು.

ಶ್ರಮದಾನ ಸೇವಾ ಕಾರ್ಯದಲ್ಲಿ ಕಲ್ಲಡ್ಕ ಶೌರ್ಯ ಘಟಕ ಅಧ್ಯಕ್ಷ ಮಾಧವ ಸಾಲಿಯಾನ್ ಕುದ್ರಬೆಟ್ಟು, ಘಟಕದ ಸಂಯೋಜಕಿ ವಿದ್ಯಾ, ಸದಸ್ಯರುಗಳಾದ ತುಳಸಿ, ಸೌಮ್ಯ, ರಮೇಶ್ ಕುದ್ರೆಬೆಟ್ಟು, ಮೌರೀಶ್, ಧನಂಜಯ, ಸಂತೋಷ್ ಬೊಲ್ಪೊಡಿ, ಚಿನ್ನಾ ಕಲ್ಲಡ್ಕ, ಮೊದಲಾದವರು ಭಾಗವಹಿಸಿದ್ದರು.

You may also like

News

ಸಮಾಜಸೇವೆಯ ಹಾದಿಗೆ ರಾಷ್ಟ್ರೀಯ ಕಿರೀಟ – ಕೋತ್ವಾಲ್ ಪದ್ಮನಾಭ ಶೇರುಗಾರ್‌ ಅವರಿಗೆ ‘ಆರ್ಯಭಟ ರಾಷ್ಟ್ರೀಯ ಪ್ರಶಸ್ತಿ’

ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡುವುದರ ಜೊತೆಗೆ ಸಮಾಜಮುಖಿ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕೋತ್ವಾಲ್ ಪದ್ಮನಾಭ ಶೇರುಗಾರ್ ಅವರು ಪ್ರತಿಷ್ಠಿತ ‘ಆರ್ಯಭಟ ರಾಷ್ಟ್ರೀಯ ಪ್ರಶಸ್ತಿ–2026’ ಗೆ ಆಯ್ಕೆಯಾಗಿದ್ದಾರೆ.
News

WIM ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಗೆ ಜಿಲ್ಲಾಧ್ಯಕ್ಷೆಯಾಗಿ ಶಿನೀರ ಬಾನು ಪುನರಾಯ್ಕೆ – ಪ್ರಧಾನ ಕಾರ್ಯದರ್ಶಿಯಾಗಿ ಝರೀನಾ ಉಪ್ಪಿನಂಗಡಿ

ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ಪ್ರತಿನಿಧಿ ಸಭೆಯು ಪಾಣೆಮಂಗಳೂರಿನ ಹೆಚ್.ಹೆಚ್. ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು. ಸಭೆಯಲ್ಲಿ ನೂತನ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ

You cannot copy content of this page