September 20, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ನೆಲ್ಲಿ ಗುಡ್ಡೆ ನೂರುಲ್ ಹುದಾ ಜುಮಾ ಮಸೀದಿಯ ವಾರ್ಷಿಕ ಮಹಾಸಭೆ

ನೂತನ ಗೌರವಾಧ್ಯಕ್ಷರಾಗಿ ಸಯ್ಯಿದ್ ಮಸ್ಊದ್ ಅಲ್ ಬುಖಾರಿ ಆಯ್ಕೆ

ಹಾಲಿ ಕಮಿಟಿಯನ್ನು ಮುಂದುವರಿಸಲು ತೀರ್ಮಾನ

ಬಂಟ್ವಾಳ ; ನೆಲ್ಲಿಗುಡ್ಡೆ ನೂರುಲ್ ಹುದಾ ಜುಮಾ ಮಸೀದಿ ಇದರ ವಾರ್ಷಿಕ ಮಹಾಸಭೆಯು ಮರ್ಹೂಂ  ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ರವರ ಸುಪುತ್ರ  ಸಯ್ಯಿದ್ ಮಸ್ಊದ್ ಅಲ್ ಬುಖಾರಿ ಕೂರತ್ ಅವರ ನೇತೃತ್ವದಲ್ಲಿ ಡಿಸೆಂಬರ್ 20ರಂದು ಶುಕ್ರವಾರ ಮಸೀದಿಯಲ್ಲಿ ನಡೆಯಿತು.

ಆಡಳಿತ ಸಮಿತಿಯ ಅಧ್ಯಕ್ಷ ಅಬೂಬಕ್ಕರ್ ನೆಲ್ಲಿಗುಡ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾ ಸಭೆಯಲ್ಲಿ ಮಸೀದಿ ಗೌರವಾಧ್ಯಕ್ಷರಾಗಿದ್ದ ಕೂರತ್ ತಂಙಳ್ ರವರ ನಿಧನದಿಂದ ತೆರವಾದ ಸ್ಥಾನಕ್ಕೆ ಅವರು ಸುಪುತ್ರ ಸಯ್ಯಿದ್ ಮಸ್ಊದ್ ಅಲ್ ಬುಖಾರಿ ಅವರನ್ನು ಗೌರವಾಧ್ಯಕ್ಷರಾಗಿ ಆಯ್ಕೆ ಮಾಡುವುದು, ಪ್ರಸ್ತುತ ಕಮಿಟಿಯನ್ನು ಮುಂದುವರಿಸುವುದು, ಕಮಿಟಿಯಲ್ಲಿ ತೆರವಾದ ಸದಸ್ಯ ಸ್ಥಾನಕ್ಕೆ ಇಸ್ಮಾಯಿಲ್ ಹಾಜಿ ಸೌತ್ ಇಂಡಿಯಾ ಹಾಗೂ ಶಬೀರ್ ಸಾಹಿಬ್ ರವರನ್ನು ಸೇರ್ಪಡೆಗೊಳಿಸುವುದು ಹಾಗೂ ಲೆಕ್ಕ ಪರಿಶೋಧಕರಾಗಿ ಅಬ್ದುಲ್ ರಹಿಮಾನ್ ಎಸ್.ಐ. ಅವರನ್ನು ನೇಮಿಸುವುದು ಎಂದು ಮಹಾ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಇದೇ ವೇಳೆ ಜಮಾಅತ್ ನ ಗೌರವಾಧ್ಯಕ್ಷರಾಗಿ ಆಯ್ಕೆಯಾದ ತಂಙಳ್ ಅವರನ್ನು ಜಮಾಅತ್ ವತಿಯಿಂದ ಸನ್ಮಾನಿಸಲಾಯಿತು. ಸ್ಥಳೀಯ ಖತೀಬ್ ಉನೈಸ್ ಸಖಾಫಿ ಅಲ್ ಅಫ್ಲಲಿ ಅಲ್ ಅರ್ಷದಿ  ಸ್ವಾಗತಿಸಿ, ಹಿತವಚನ ನೀಡಿದರು. ಪ್ರಧಾನ ಕಾರ್ಯದರ್ಶಿ ಮುಸ್ತಾಕ್ ಬೇಗ್ ವರದಿ ವಾಚಿಸಿ, ಲೆಕ್ಕ ಪತ್ರ ಮಂಡಿಸಿದರು.

You may also like

News

ಸಾಣೂರು ಜಂಕ್ಷನ್‌ನಲ್ಲಿ ಮಾಜಿ ಸಚಿವ ರಮಾನಾಥ ರೈ ಕಾರಿಗೆ ಬಸ್ ಡಿಕ್ಕಿ – ಹಲವರಿಗೆ ಗಾಯ

ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಮುಖಂಡ ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಖಾಸಗಿ ಬಸ್‌ ಡಿಕ್ಕಿ ಹೊಡೆದ ಘಟನೆ ಇಂದು ಸೆಪ್ಟೆಂಬರ್ 20ರಂದು ಭಾನುವಾರ ಕಾರ್ಕಳ–ಮೂಡುಬಿದಿರೆ
News

ಬಂಟ್ವಾಳ ಲೋಕ ಅದಾಲತ್ – 12,400 ಪ್ರಕರಣ ಇತ್ಯರ್ಥ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಬಂಟ್ವಾಳದ ಬಿ.ಸಿ. ರೋಡ್ ನ್ಯಾಯಾಲಯದಲ್ಲಿ ಸೆಪ್ಟೆಂಬರ್ 19ರಂದು ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 13,223 ಪ್ರಕರಣಗಳನ್ನು ಪರಿಗಣಿಸಿ,

You cannot copy content of this page