ಕರ್ನಾಟಕ ಕ್ಯಾಥೋಲಿಕ್ ‘ತಿಂಕ್ ಟ್ಯಾಂಕ್’ನ ನೂತನ ಅಧ್ಯಕ್ಷರಾಗಿ ಮಂಗಳೂರಿನ ರೋಯ್ ಕ್ಯಾಸ್ತೆಲಿನೊ ಸರ್ವಾನುಮತದಿಂದ ಆಯ್ಕೆ
ಬೆಂಗಳೂರು ಸಪ್ಟಂಬರ್ 25 : ಬೆಂಗಳೂರಿನ ಸುವೋಧನಾ ಕ್ರಾಸ್ ನಲ್ಲಿ ನಡೆದ ಕರ್ನಾಟಕ ಕ್ಯಾಥೋಲಿಕ್ ‘ತಿಂಕ್ ಟ್ಯಾಂಕ್’ನ ವಾರ್ಷಿಕ ಸಭೆಯಲ್ಲಿ ಸಮಾಜದ ಸವಾಲುಗಳನ್ನು ಎದುರಿಸಲು ‘ತಿಂಕ್ ಟ್ಯಾಂಕ್’ನ ಪಾತ್ರವನ್ನು ಬಲಪಡಿಸುವ ಉದ್ದೇಶದಿಂದ ಚುನಾವಣೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಮಂಗಳೂರು ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿ ರೋಯ್ ಕ್ಯಾಸ್ತೆಲಿನೊ ಅವರನ್ನು ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಜಾಕಬ್ ಕ್ರಾಸ್ತಾ ಹಾಗೂ ಆ್ಯಂಟನಿ ಮೆಂಡೋನ್ಸಾ ಇವರನ್ನು ಉಪಾಧ್ಯಕ್ಷರುಗಳಾಗಿ ಆಯ್ಕೆ ಮಾಡಲಾಯಿತು. ಲೈಟಿ ಕ್ಷೇತ್ರದ ಪ್ರಾದೇಶಿಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಕ್ಲಾರಾ ಫೆರ್ನಾಂಡಿಸ್ ಕಾರ್ಯದರ್ಶಿಯಾಗಿ, ನಿರ್ಮಲರವರನ್ನು ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು.
ಕರ್ನಾಟಕ ಕ್ಯಾಥೋಲಿಕ್ ‘ತಿಂಕ್ ಟ್ಯಾಂಕ್’ ಕಾನೂನು, ನಾಗರಿಕ ಸೇವೆಗಳು, ಶಿಕ್ಷಣ, ಮಾಧ್ಯಮ ಮತ್ತು ಆರೋಗ್ಯ ಸೇವೆಗಳಂತಹ ವಿಭಿನ್ನ ಕ್ಷೇತ್ರಗಳ ವೃತ್ತಿಪರರನ್ನು ಒಗ್ಗೂಡಿಸುತ್ತದೆ. ಈ ಮೂಲಕ ಕರ್ನಾಟಕದಲ್ಲಿರುವ ಚರ್ಚ್ ಗಳಿಗೆ ತಾಂತ್ರಿಕ ಸಲಹೆ ಮತ್ತು ಬೆಂಬಲವನ್ನು ನೀಡುತ್ತದೆ.