ಗ್ರಾಮ ಪಂಚಾಯತ್ ಪಿಡಿಓ ನೋಟಿಸಿಗೆ ಹೈಕೋರ್ಟ್ ತಡೆ – ಫಲಭರಿತ ತೆಂಗಿನ ಮರ ಕಡಿಯದಂತೆ ಆದೇಶ
![](https://karavalisuddi.com/wp-content/uploads/2024/10/high-court-1-1200x700.webp)
ಬಂಟ್ವಾಳ : ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರಿಪಳ್ಳ ಎಂಬಲ್ಲಿ ಫ್ರಾನ್ಸಿಸ್ ವಾಸ್ ಎಂಬವರಿಗೆ ಸೇರಿದ್ದ ಫಲಭರಿತ ತೆಂಗಿನಮರವನ್ನು ಕಡಿಯುವಂತೆ ಪುದು ಗ್ರಾಮ ಪಂಚಾಯತ್ ಪಿಡಿಓ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಆದೇಶಿಸಿದೆ. ಅದೇ ಪಂಚಾಯತಿನ ಪ್ರಭಾವಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಸರಿಯಾಗಿ ಪರಿಶೀಲಿಸದೆ ಸಮೃದ್ಧ ಫಲಭರಿತ ತೆಂಗಿನ ಮರವನ್ನು ತಕ್ಷಣ ಕಡಿಯುವಂತೆ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಯವರ ಸೂಚನೆಯಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಾಸ್ ರವರಿಗೆ ನೋಟಿಸ್ ನೀಡಿದ್ದರು.
ಸದ್ರಿ ನೋಟಿಸನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಫ್ರಾನ್ಸಿಸ್ ವಾಸ್ ರವರ ಅರ್ಜಿಯನ್ನು ಬುಧವಾರ ವಿಚಾರಿಸಿದ ಜಸ್ಟಿಸ್ ಮಹಮ್ಮದ್ ನವಾಝ್ ರವರ ಪೀಠವು ಅರ್ಜಿಯನ್ನು ಪರಿಶೀಲಿಸಿ ಮರ ಕಡಿಯದಂತೆ ತಡೆಯಾಜ್ಞೆ ನೀಡಿದೆ. ಅರ್ಜಿದಾರರ ಪರವಾಗಿ ಬೆಂಗಳೂರಿನ ಆರ್. ಪಿ. ಡಿಸೋಜಾ ಅಸೋಸಿಯೇಟ್ಸ್ ನ ಯುವ ವಕೀಲ ಆರ್. ಪಿ. ಡಿಸೋಜಾರವರು ವಾದ ಮಂಡಿಸಿದರು.