ವಾಮಂಜೂರು ಗ್ರಾಮಾಂತರ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ – ಕಥೊಲಿಕ್ ಸಭಾ ಅಧ್ಯಕ್ಷರ ಹಲ್ಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ಬಂಧನ
ಮಂಗಳೂರು : ಪಾವೂರು ಉಳಿಯ ಬಳಿ ಮರಳು ಮಾಫಿಯಾ ಕುರಿತು ವೀಕ್ಷಣೆಗೆ ತೆರಳಿದ್ದ ಕಥೊಲಿಕ್ ಸಭಾ ಸಂಘಟನೆಯ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಜೆರೊಮ್ ಡಿಸೋಜ ಪಾನೀರ್ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕು ಫರಂಗಿಪೇಟೆ ಪುದು ಗ್ರಾಮದ ಮೊಹಮ್ಮದ್ ಅತಾವುಲ್ಲ (40) ಮತ್ತು ಮಾರ್ನಮಿಕಟ್ಟೆ ಶಮಾ ಅಪಾರ್ಟ್ ಮೆಂಟ್ ನ್ ತೌಸ್ರ್ ಆಲಿಯಾಸ್ ಪತ್ತೊಂಜಿ ತೌಚಿ (31) ಬಂಧಿತ ಆರೋಪಿಗಳು. ಇವರ ಪೈಕಿ ಅತಾವುಲ್ಲಾನು ಘಟನೆಯ ಸಮಯದಲ್ಲಿ ಆಲ್ವಿನ್ ಅವರನ್ನು ಅವ್ಯಾಚ್ಯವಾಗಿ ನಿಂದಿಸಿ ಹಲ್ಲೆಗೆ ಪ್ರಚೋದನೆ ನೀಡಿದ್ದ ಹಾಗೂ ಆರೋಪಿ ತೌಸಿರ್ ಹಲ್ಲೆ ಮಾಡಿದ್ದ.
ಅಕ್ಟೋಬರ್ 5ರಂದು ಆಲ್ವಿನ್ ಅವರಿಗೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.