ಕೊಕ್ಕಡ ಸೈಂಟ್ ಜೋನ್ ಬ್ಯಾಪ್ಟಿಸ್ಟ್ ಚರ್ಚ್ ನಲ್ಲಿ “ಗಾದ್ಯಾಂತ್ ಏಕ್ ದೀಸ್” ಕಾರ್ಯಕ್ರಮ ಆಚರಣೆ
ಕೊಕ್ಕಡ : ಸೈಂಟ್ ಜೋನ್ ಬ್ಯಾಪ್ಟಿಸ್ಟ್ ಚರ್ಚ್ ನಲ್ಲಿ ಐಸಿವೈಯಂ ಕೊಕ್ಕಡ ಘಟಕದ ವತಿಯಿಂದ “ಗಾದ್ಯಾಂತ್ ಏಕ್ ದೀಸ್” ಕಾರ್ಯಕ್ರಮವು ನಡೆಯಿತು. ಬಾಲಯೇಸು ಚರ್ಚ್ ನೆಲ್ಯಾಡಿ ಇಲ್ಲಿಯ ಧರ್ಮಗುರು ವಂದನೀಯ ಫಾದರ್ ಗ್ರೇಶಿಯನ್ ಆಲ್ವಾರಿಸ್ ಇವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಕೊಕ್ಕಡ ಚರ್ಚ್ ಧರ್ಮಗುರು ವಂದನೀಯ ಫಾದರ್ ಅನಿಲ್ ಪ್ರಕಾಶ್ ಡಿಸಿಲ್ವಾ ಅಧ್ಯಕ್ಷತೆಯನ್ನು ವಹಿಸಿದ್ದರು.
ದೇವಾಲಯದ ಆರು ವಾಳೆಯ ಸದಸ್ಯರು ನಡೆಸಿದ ಪಥ ಸಂಚಲನವು ಎಲ್ಲರನ್ನು ಆಕರ್ಷಿಸಿತ್ತು. ಪ್ರಾರ್ಥನೆಯನ್ನು ಐಸಿವೈಯಂ ಸದಸ್ಯರು ನಡೆಸಿಕೊಟ್ಟರು.
ವೇದಿಕೆಯಲ್ಲಿ ಭಗಿನಿ ಸ್ಟ್ರೆಲ್ಲಾ, ಭಗಿನಿ ಜಾಕಲಿನ್, ಚರ್ಚ್ ಉಪಾಧ್ಯಕ್ಷ ನೋಯೆಲ್ ಮೊಂತೇರೊ, ಕಾರ್ಯದರ್ಶಿ ವೀಣಾ ಮಸ್ಕರೇನ್ಹಸ್, ಆಯೋಗಗಳ ಸಂಚಾಲಕಿ ವಿನ್ನಿಫ್ರೆಡ್ ಡಿಸೋಜ, ಐಸಿವೈಯಂ ಕೊಕ್ಕಡ ಘಟಕದ ಸಚೇತಕ ಜಯಂತ್ ಡಿಸೋಜ, ಅಧ್ಯಕ್ಷೆ ಸಹನಾ ಡಿಸೋಜ, ಕಾರ್ಯದರ್ಶಿ ವಿನೀತ್ ಮೊಂತೇರೊ ಕ್ರೀಡಾ ಕಾರ್ಯದರ್ಶಿ ಜಾನ್ಸನ್ ಪಾಯ್ಸ್, ನಿಕಟ ಪೂರ್ವ ಅಧ್ಯಕ್ಷ ಪ್ರದೀಪ್ ಡಿಸೋಜ ಉಪಸ್ಥಿತರಿದ್ದರು.
ಸಹನಾ ಡಿಸೋಜ ಸ್ವಾಗತಿಸಿ, ವಿನೀತ್ ಮೊಂತೇರೊ ವಂದಿಸಿದರು. ಸಭಾ ಕಾರ್ಯಕ್ರಮವನ್ನು ವಿಲ್ಸಿಟಾ ಮೊಂತೇರೊ ನಿರೂಪಿಸಿದರು. ಎಲ್ಲಾ ಸ್ಪರ್ಧೆಗಳನ್ನು ಐಸಿವೈಯಂ ಸಂಘಟನೆಯ ಮುಂದಾಳತ್ವದಲ್ಲಿ ನಡೆಯಿತು. ಕಾರ್ಯಕ್ರಮದ ಹಿತಚಿಂತಕರನ್ನು ಗುರುತಿಸಿ ಅವರ ಕೊಡುಗೆಗಾಗಿ ಗೌರವಿಸಲಾಯಿತು.