ಪುತ್ತೂರು ತೀಯಾ ಸಮಾಜ ಸೇವಾ ಸಮಿತಿಯ ನೂತನ ಅಧ್ಯಕ್ಷರಾಗಿ ಜೆ.ಪಿ. ಸಂತೋಷ್ ಕುಮಾರ್ ಮುರ ಆಯ್ಕೆ

ಪುತ್ತೂರು ತೀಯಾ ಸಮಾಜ ಸೇವಾ ಸಮಿತಿ (ರಿ.) ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಜಗದೀಶ್ ಶಾಂತಿ ಪೌರಾತ್ಯದಲ್ಲಿ ಶ್ರೀ ದುರ್ಗಾ ಪೂಜೆಯು ಅಕ್ಟೋಬರ್ 13ರಂದು ಆದಿತ್ಯವಾರ ಪುತ್ತೂರು ಏಳ್ಮುಡಿಯಲ್ಲಿರುವ ಮಹಾದೇವಿ ಸಂಕೀರ್ಣದಲ್ಲಿ ನಡೆಯಿತು. ಈ ಮಹಾಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಜೆ.ಪಿ. ಸಂತೋಷ್ ಕುಮಾರ್ ಮುರ ಮತ್ತು ಕಾರ್ಯದರ್ಶಿಯಾಗಿ ಸಂತೋಷ್ ಮುಕ್ರಂಪಾಡಿ ಹಾಗೂ ಮಹಿಳಾ ಅಧ್ಯಕ್ಷರಾಗಿ ವಿ. ಪ್ರಭಾವತಿ ಆಯ್ಕೆಗೊಂಡರು.
ನೂತನ ಸಮಿತಿಯ ಪದಾಧಿಕಾರಿಗಳ ವಿವರ:
- ಪಿ.ಕೆ. ನಾರಾಯಣ ಸಾಲ್ಮರ – ಗೌರವ ಸಲಹೆಗಾರರು
- ಗೋಪಾಲಕೃಷ್ಣ – ಗೌರವ ಅಧ್ಯಕ್ಷರು
- ಜೆ.ಪಿ. ಸಂತೋಷ್ ಕುಮಾರ್ – ಅಧ್ಯಕ್ಷರು
- ಯು.ಪಿ. ರಾಜೇಶ್ – ಉಪಾಧ್ಯಕ್ಷರು
- ಶಶಿಧರ್ ಬೆಳ್ಳಾರೆ – ಉಪಾಧ್ಯಕ್ಷರು
- ರಾಜೇಶ್ (ಭೂಮಿ) – ಉಪಾಧ್ಯಕ್ಷರು
- ವಿಜಯಕುಮಾರ್ – ಉಪಾಧ್ಯಕ್ಷರು
- ಸತೀಶ್ ಕೆ.ಎಸ್.ಆರ್.ಟಿ.ಸಿ. – ಉಪಾಧ್ಯಕ್ಷರು
- ಪುರುಷೋತ್ತಮ ಕೊಯ್ಲಾ – ಉಪಾಧ್ಯಕ್ಶರು
- ಸಂತೋಷ್ ಮುಕ್ರಂಪಾಡಿ – ಪ್ರಧಾನ ಕಾರ್ಯದರ್ಶಿ
- ದೀಪಕ್ – ಜೊತೆ ಕಾರ್ಯದರ್ಶಿ
- ಟಿ. ರಾಜೀವ – ಸಂಘಟನಾ ಕಾರ್ಯದರ್ಶಿ
- ರವೀಂದ್ರ – ಸಂಘಟನಾ ಕಾರ್ಯದರ್ಶಿ
- ರಾಘವ – ಸಂಘಟನಾ ಕಾರ್ಯದರ್ಶಿ
- ದಯಾನಂದ ಮುರ – ಸಂಘಟನಾ ಕಾರ್ಯದರ್ಶಿ
- ಆಶ್ಲೇಶ್ – ಸಂಘಟನಾ ಕಾರ್ಯದರ್ಶಿ
- ಬಿ.ಎಂ. ಶ್ರೀಧರ್ – ಕೋಶಾಧಿಕಾರಿ
ಮಹಿಳಾ ಘಟಕದ ಪ್ರದಾಧಿಕಾರಿಗಳು:
- ಸಂಧ್ಯಾ ರಾಜೇಶ್ (ಹಿಮ) – ಗೌರವ ಸಲಹೆಗಾರರು
- ವಿ. ಪ್ರಭಾವತಿ – ಅಧ್ಯಕ್ಷರು
- ಶಶಿಕಲಾ ತೆಂಕಿಲ – ಉಪಾಧ್ಯಕ್ಷರು
- ವತ್ಸಲಾ ಶ್ರೀಧರ್ – ಉಪಾಧ್ಯಕ್ಷರು
- ಅನಿತಾ ಪುರುಷೋತ್ತಮ – ಉಪಾಧ್ಯಕ್ಷರು
- ಅಶ್ವಿನಿ ರಾಜೇಶ್ – ಕಾರ್ಯದರ್ಶಿ
- ಸುಶ್ಮಿತಾ – ಸಾಂಸ್ಕೃತಿಕ ಕಾರ್ಯದರ್ಶಿ
- ಮಲ್ಲಿಕಾ ಗೋಪಾಲ್ – ಸಾಂಸ್ಕೃತಿಕ ಕಾರ್ಯದರ್ಶಿ
- ಸುವರ್ಣ ಚಂದ್ರಿಕಾ – ಸಾಂಸ್ಕೃತಿಕ ಕಾರ್ಯದರ್ಶಿ
ಆಯ್ಕೆಗೊಂಡ ಅಧ್ಯಕ್ಷರಿಗೆ ಮತ್ತು ಎಲ್ಲಾ ಪದಾಧಿಕಾರಿಗಳಿಗೆ ಪುತ್ತೂರು ತೀಯಾ ಸಮಾಜ ಸೇವಾ ಸಮಿತಿಯ ಸದಸ್ಯರು ಅಭಿನಂದನೆಗಳನ್ನು ಸಲ್ಲಿಸಿದರು. ಸಭೆಯ ಅಧ್ಯಕ್ಷತೆಯನ್ನು ಗೋಪಾಲಕೃಷ್ಣ ವಹಿಸಿದ್ದರು. ಪುರುಷೋತ್ತಮ ಕೇಪುಲು ಇವರು ಚುನಾವಣೆಯನ್ನು ನಡೆಸಿಕೊಟ್ಟರು ಹಾಗೂ ಕಾರ್ಯಕ್ರಮ ನಿರೂಪಿಸಿದರು. ಸಹನಾ ಪ್ರಾರ್ಥಿಸಿದರು ಮತ್ತು ದಯಾನಂದ ಮುರ ಸ್ವಾಗತಿಸಿದರು. ಸುವರ್ಣ ಚಂದ್ರಿಕಾ ಬೆಳ್ಳಾರೆ ಧನ್ಯವಾದ ಸಮರ್ಪಿಸಿದರು. ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.