ಶ್ರೀ ಮಹಾಭಾರತ ಸರಣಿಯ 50 ನೇ ತಾಳಮದ್ದಳೆ ಅಭಿಮನ್ಯು ಕಾಳಗ

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘವು 50ನೇ ವರ್ಷಾಚರಣೆ ನಿಮಿತ್ತ ನಡೆಸುತ್ತಿರುವ ಮಹಾಭಾರತ ಸರಣಿಯ 100 ತಾಳಮದ್ದಳೆಗಳಲ್ಲಿ 50ನೇ ತಾಳಮದ್ದಳೆಯು ಉಪ್ಪಿನಂಗಡಿ ಸಾರ್ವಜನಿಕ ಶ್ರೀ ಶಾರದೋತ್ಸವ ಪ್ರಯುಕ್ತ ರಾಮನಗರದ ಶ್ರೀ ಶಾರದಾ ಕಲಾಮಂಟಪದಲ್ಲಿ ಜರಗಿತು.
ಶ್ರೀ ಶಾರದೋತ್ಸವ ಸಮಿತಿಯ ಪ್ರಾಯೋಜಕತ್ವದಲ್ಲಿ ನಡೆದ ಅಭಿಮನ್ಯು ಕಾಳಗದಲ್ಲಿ ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ಡಿ.ಕೆ. ಆಚಾರ್ಯ ಅಲಂಕಾರು, ಸುರೇಶ್ ರಾವ್ ಬನ್ನೆಂಗಳ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ್ ಆಳ್ವ ಬಾರ್ಯ ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ (ಸುಭದ್ರೆ) ಸತೀಶ್ ಆಚಾರ್ಯ ಮಾಣಿ (ದ್ರೋಣ) ಗುಡ್ಡಪ್ಪ ಗೌಡ ಬಲ್ಯ, ಹರೀಶ ಆಚಾರ್ಯ ಬಾರ್ಯ (ಅಭಿಮನ್ಯು) ಮಹಾಲಿಂಗೇಶ್ವರ ಭಟ್ ಪೆರಿಯಡ್ಕ (ಕರ್ಣ) ಜಯರಾಮಗೌಡ ಬಲ್ಯ (ದುಶ್ಯಾಸನ, ಜಯದ್ರಥ) ಜಿನೇಂದ್ರ ಜೈನ್ ಬಳ್ಳಮಂಜ (ಕೌರವ) ದಿವಾಕರ ಆಚಾರ್ಯ ನೇರೆಂಕಿ (ಗಯಾಯುಧ) ಸಂಜೀವ ಪಾರೆಂಕಿ(ಧರ್ಮರಾಯ) ಹರಿಕಿರಣ್ ಕೊಯ್ಲ (ಭೀಮ) ಭಾಗವಹಿಸಿದ್ದರು.
ರಾಮನಗರದ ಸೌಹಾರ್ದ ಯಕ್ಷಗಾನ ಸಮಿತಿ ವತಿಯಿಂದ ಕಲಾವಿದ ಗುಡ್ಡಪ್ಪ ಬಲ್ಯರನ್ನು ಸನ್ಮಾನಿಸಲಾಯಿತು. ಶ್ರೀ ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಶೆಣೈ ಎನ್. ಕಾರ್ಯಾಧ್ಯಕ್ಷ ರಾಮಚಂದ್ರ ಮಣಿಯಾಣಿ, ಅಧ್ಯಕ್ಷ ಚಂದ್ರಶೇಖರ ಮಡಿವಾಳ, ಖಜಾಂಜಿ ವಿಶ್ವನಾಥ ಶೆಟ್ಟಿ ಕಂಗ್ವೆ ತಾಳಮದ್ದಳೆಯ ಕಲಾವಿದರನ್ನು ಗೌರವಿಸಿದರು. ಈ ಮೂಲಕ 50ನೇ ಕಾರ್ಯಕ್ರಮವು ವಿಶಿಷ್ಟವಾಗಿ ಜರಗಿತು. ಸಂಘದ ಕಾರ್ಯದರ್ಶಿ ಶ್ರೀಪತಿ ಭಟ್ ಸ್ವಾಗತಿಸಿ ಸಮಿತಿಯ ಪದಾಧಿಕಾರಿ ಜಯಂತ ಪುರೋಳಿ ವಂದಿಸಿದರು.