March 26, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಎಸಿಪಿಐ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಕ್ರೈಸ್ತ ವಿದ್ಯಾ ಪೀಠದ ವತಿಯಿಂದ (ಸಿಐಸಿ) 42ನೇ ವಾರ್ಷಿಕ ಸಂಶೋಧನಾ ಸಮ್ಮೇಳನದ ಆಯೋಜನೆ

 ಮಂಗಳೂರು ಅಕ್ಟೋಬರ್ 15 : ಭಾರತೀಯ ಕ್ರೈಸ್ತ ತತ್ತ್ವಶಾಸ್ತ್ರೀಯ ಚಿಂತಕರ ಒಕ್ಕೂಟ (ಎಸಿಪಿಐ) ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಕ್ರೈಸ್ತ ವಿದ್ಯಾಪೀಠದ (ಸಿಐಸಿ) ಸಹಯೋಗದಲ್ಲಿ, ಅಕ್ಟೋಬರ್ 19-21ರವರೆಗೆ ಮಂಗಳೂರಿನ ಜೆಪ್ಪು ಸಂತ ಜೋಸೆಫರ ಇಂಟರ್ ಡಯಾಸಿಸ್ ಸೆಮಿನರಿಯಲ್ಲಿ 47ನೇ ವಾರ್ಷಿಕ ತತ್ವಶಾಸ್ತ್ರ ಸಂಶೋಧನಾ ಸಮ್ಮೇಳನವನ್ನು ಆಯೋಜಿಸಲಾಗಿದೆ.

ಸಮ್ಮೇಳನದ ವಿಷಯ: “ಭರವಸೆ: ಬಹು ಆಯಾಮಗಳೊಂದಿಗೆ ತತ್ತ್ವಶಾಸ್ತ್ರೀಯ ವಿಶ್ಲೇಷಣೆ.” ಈ ವಿಷಯವು 2025ರಲ್ಲಿ ಜಗದ್ಗುರು ಪೋಪ್ ಫ್ರಾನ್ಸಿಸ್ ಘೋಷಿಸಿರುವ ಜ್ಯೂಬಿಲಿ ವರ್ಷದ “ಭರವಸೆಯ ಯಾತ್ರಿಕರು” ಎಂಬ ಧ್ಯೇಯ ವಾಕ್ಯಕ್ಕೆ ಪೂರಕವಾಗಿದೆ. ಜಗತ್ತಿನಲ್ಲಿನ ಸಂಘರ್ಷಗಳು, ಅಸಹಿಷ್ಣುತೆ, ಪರಿಸರಮಾಲಿನ್ಯ ಹಾಗೂ ಹವಾಮಾನ ವೈಪರೀತ್ಯ ಮತ್ತು ಇತರ ಜಾಗತಿಕ ಸವಾಲುಗಳಿಂದ ನಲುಗಿದ ಇಂದಿನ ದಿನಗಳಲ್ಲಿ ಈ ಸಮ್ಮೇಳನವು ಭರವಸೆಯ ತಾತ್ತ್ವಿಕ ಮೌಲ್ಯಗಳನ್ನು ಮರುಪರಿಶೀಲಿಸಿ ಭವಿಷ್ಯದ ಉತ್ತಮ ಸಮಾಜವನ್ನು ಕಟ್ಟುವ ಕುರಿತು ಚಿಂತನೆ ನಡೆಸಲಿದೆ. 3 ದಿನಗಳಲ್ಲಿ ಭರವಸೆಯ ವಿವಿಧ ಆಯಾಮಗಳನ್ನು ಅವಲೋಕಿಸುವ 28 ಸಂಶೋಧನಾ ಪ್ರಬಂಧಗಳು ಭರವಸೆಯ ಸಮಾಜವನ್ನು ಕಟ್ಟಲು ಪ್ರೇರಣೆ ನೀಡಲಿವೆ.

1976ರಲ್ಲಿ ಡಾ. ರಿಚರ್ಡ್ ದೆಸ್ಮೆಟ್ ಮತ್ತು ಡಾ. ಆಲ್ಬರ್ಟ್ ನಂಬಿಯಪರಂಬಿಲ್‌ರವರಿಂದ ಸ್ಥಾಪಿತಗೊಂಡ ಎಸಿಪಿಐ, ಭಾರತೀಯ ಕ್ರೈಸ್ತ ತತ್ತ್ವ ಶಾಸ್ತ್ರೀಯ ಚಿಂತನೆಗೆ ಮಹತ್ವದ ಕೊಡುಗೆ ನೀಡುತ್ತಿರುವ ಪ್ರತಿಷ್ಠಿತ ಒಕ್ಕೂಟವಾಗಿದೆ. 1987ರಲ್ಲಿ ಬಿಷಪ್ ಬಾಜಿಲ್ ಸಾಲ್ವದೋರ್‍ ಡಿಸೋಜಾ ಇವರಿಂದ ಸ್ಥಾಪಿಸಲ್ಪಟ್ಟ ಮಂಗಳೂರು ವಿಶ್ವವಿದ್ಯಾನಿಲಯದ ಕ್ರೈಸ್ತ ವಿದ್ಯಾಪೀಠವು ತತ್ತ್ವಶಾಸ್ತ್ರ, ನೀತಿಶಾಸ್ತ್ರ, ಅಂತರ್‌ ಧರ್ಮೀಯ ಅಧ್ಯಯನಗಳನ್ನು ಉತ್ತೇಜಿಸುತ್ತಿದೆ ಮತ್ತು ಸಮಕಾಲೀನ ಸಾಮಾಜಿಕ ಮತು ಪರಿಸರ ಸಂಬಂಧಿತ ಸಮಸ್ಯೆಗಳನ್ನೂ ಚರ್ಚಿಸುತ್ತದೆ. ಸಮ್ಮೇಳನದಲ್ಲಿ ಈ ಕೆಳಗಿನ ಪ್ರಮುಖ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ: ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ, ಮಂಗಳೂರು ವಿಶ್ವವಿದ್ಯಾನಿಲಯದ ಆಂಗ್ಲ ವಿಭಾಗದ ಮುಖ್ಯಸ್ಥೆ ಡಾ. ಪರಿಣಿತಾ, ಎಸಿಪಿಐ ಅಧ್ಯಕ್ಷರು, ವಂದನೀಯ ಡಾ. ಜಾನ್ ಪೀಟರ್ ವಲ್ಲಭದಾಸ್, ಸಂತ ಜೋಸೆಫರ ಇಂಟರ್ ಡಯಾಸಿಸ್ ಸೆಮಿನರಿಯ ರೆಕ್ಟರ್ ಅತೀ ವಂದನೀಯ ಡಾ. ರೊನಾಲ್ಡ್ ಸೆರಾವೊ ಇವರಲ್ಲದೆ ಈ ಸಮ್ಮೇಳನದಲ್ಲಿ ದೇಶಾದ್ಯಂತ 100ಕ್ಕೂ ಹೆಚ್ಚು ವಿದ್ವಾಂಸರು, ತಜ್ಞರು, ಚಿಂತಕರು, ಶಿಕ್ಷಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಡಾ. ಪರಿಣಿತಾ ಅವರ ಮುಖ್ಯ ಭಾಷಣವನ್ನು ಆಲಿಸಲು ಆಸಕ್ತರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಬಹುದು.

ಪತ್ರಿಕಾ ಗೋಷ್ಠಿಯಲ್ಲಿ ಅತೀ ವಂದನೀಯ ಡಾ. ರೊನಾಲ್ಡ್ ಸೆರಾವೊ, ರೆ. ಡಾ. ಐವನ್ ಡಿಸೋಜಾ, ವಂದನೀಯ ಫಾದರ್ ಫ್ರಾನ್ಸಿಸ್ ಡಿಸೋಜಾ, ವಂದನೀಯ ಫಾದರ್ ಜೋಸ್ವಿನ್ ಪ್ರವೀಣ್ ಡಿಸೋಜಾ, ಬ್ರದರ್ ಡೆರಿಕ್ ಮಸ್ಕರೇನ್ಹಸ್ ಹಾಗೂ ಫೋರ್‌ವಿಂಡ್ಸ್ ನಿರ್ದೇಶಕ ಎಲಿಯಾಸ್ ಫೆನಾಂಡಿಸ್ ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ ಡಾ. ಐವನ್ ಡಿಸೋಜ (9481920105) ಸ್ಥಳೀಯ ಸಂಯೋಜಕರು ಇವರನ್ನು ಸಂಪರ್ಕಿಸಲು ಸಂಘಟಕರು ವಿನಂತಿಸಿದ್ದಾರೆ.

You may also like

News

ದಲಿತ ಅಪ್ರಾಪ್ತ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬಿಜೆಪಿ ಮುಖಂಡ ಮಹೇಶ್ ಭಟ್ ಬಂಧನಕ್ಕೆ ಡಿಎಚ್ಎಸ್ ಒತ್ತಾಯ – ಕಠಿಣ ಕ್ರಮಕ್ಕೆ ಆಗ್ರಹ

ಬಂಟ್ವಾಳ ತಾಲೂಕಿನ ವಿಟ್ಲದ ಮುರುವ ಎಂಬಲ್ಲಿ ದಲಿತ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳಿಗೆ ಸ್ಥಳೀಯ ಬಿಜೆಪಿ ಮುಖಂಡ ಮಹೇಶ್ ಭಟ್ ಎಂಬವನು ನಿರಂತರ ಲೈಂಗಿಕ ಕಿರುಕುಳ ನೀಡುವ ಮೂಲಕ ಮಾನಸಿಕ
News

ನೇತ್ರದಾನದಿಂದ ಇನ್ನೊಬ್ಬರ ಬಾಳಿಗೆ ಬೆಳಕು – ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ

ಮಂಗಳೂರು : ಇನ್ನೊಬ್ಬರ ಬಾಳಿಗೆ ಬೆಳಕಾಗುವ ನೇತ್ರದಾನ ಶ್ರೇಷ್ಠ ದಾನವಾಗಿದ್ದು, ನೇತ್ರದಾನಿಗಳ ಬದ್ಧತೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ ಹೇಳಿದರು. ದಕ್ಷಿಣ ಕನ್ನಡ

You cannot copy content of this page