April 20, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೂರಿಕುಮೇರುವಿನಲ್ಲಿ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಸಾಹಿತ್ಯೋತ್ಸವ – ನೂರಾರು ಪ್ರತಿಭೆಗಳ ಕಲರವ

ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್, ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ವತಿಯಿಂದ “ನಿರೀಕ್ಷೆಗಳ ನೀಲ ನಕ್ಷೆ” ಎಂಬ ಸ್ಲೋಗನ್ ನೊಂದಿಗೆ ಸಾಹಿತ್ಯೋತ್ಸವ ಕಾರ್ಯಕ್ರಮವು ಇದೇ ಅಕ್ಟೋಬರ್ 20ರಂದು ಆದಿತ್ಯವಾರ ಸೂರಿಕುಮೇರು ಮಸೀದಿ ಬಳಿಯ ಆಟದ ಮೈದಾನದಲ್ಲಿ ನಡೆಯಲಿದೆ.

ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿ ದುಆ ನಡೆಸಿಕೊಡಲಿರುವರು. ಬಂಡಾಡಿ ಮುಹಮ್ಮದ್ ಹಾಜಿ ಸೂರಿಕುಮೇರು, ಪತ್ರಕರ್ತ ಲತೀಫ್ ನೇರಳಕಟ್ಟೆ ಧ್ವಜಾರೋಹಣ ಮಾಡಲಿರುವರು. ಬಳಿಕ ಮಾಣಿ ಸೆಕ್ಟರ್ ವ್ಯಾಪ್ತಿಯ ಪಾಟ್ರಕೋಡಿ, ಮಿತ್ತೂರು, ಸೂರ್ಯ, ನೇರಳಕಟ್ಟೆ, ಶೇರಾ, ಬುಡೋಳಿ, ಸೂರಿಕುಮೇರು ಯುನಿಟ್ ಗಳ ಪ್ರತಿಭೆಗಳ ಮಧ್ಯೆ ಸಾಹಿತ್ಯೋತ್ಸವ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ.

ಸಂಜೆ ನಡೆಯುವ ಸಮರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಉಲಮಾ ಉಮರಾ ಸಾಮಾಜಿಕ ನಾಯಕರುಗಳು, ಸೆಕ್ಟರ್, ಯುನಿಟ್ ಪ್ರತಿನಿಧಿಗಳು ಭಾಗವಹಿಸಲಿರುವರು. ಮರ್‌ಹೂಂ ಸರ್ಫ್ರಾಝ್ ನೆಲ್ಲಿ ನಗರ, ಮರ್‌ಹೂಂ ಅಬ್ಬಾಸ್ ಪಟ್ಲಕೋಡಿ ವೇದಿಕೆ, ಮರ್‌ಹೂಂ ಇರ್ಶಾದ್ ಉಮ್ಮರ್ ವೇದಿಕೆ, ಮರ್‌ಹೂಂ ಬಿನ್ಯಾಮಿನ್ ಝುಹ್ರಿ ವೇದಿಕೆ, ಮರ್‌ಹೂಂ ಅಬ್ದುಲ್ ರಝಾಕ್ ವೇದಿಕೆಗಳಲ್ಲಿ ಕಾರ್ಯಕ್ರಮ ಮತ್ತು ಸ್ಪರ್ಧೆಗಳು ನಡೆಯಲಿದೆ ಎಂದು ಸೆಕ್ಟರ್ ಅಧ್ಯಕ್ಷ ಸಾಬಿತ್ ಪಾಟ್ರಕೋಡಿ, ಕಾರ್ಯದರ್ಶಿ ಮುಬಶ್ಶಿರ್ ಸ‌ಅದಿ ಸೂರಿಕುಮೇರು, ಕೋಶಾಧಿಕಾರಿ ಇಮ್ರಾನ್ ಮಾಣಿ ಮತ್ತು ಸ್ವಾಗತ ಸಮಿತಿ ಚೇರ್ಮನ್ ಹನೀಫ್ ಸಂಕ, ಕನ್ವೀನರ್ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ, ಫೈನಾನ್ಸ್ ಸೆಕ್ರೆಟರಿ ಯೂಸುಫ್ ಹಾಜಿ, ಮಾಧ್ಯಮ ಕಾರ್ಯದರ್ಶಿ ಸಲೀಂ ಮಾಣಿ ಪ್ರಕಟಣೆಯಲ್ಲಿ ತಿಳಿಸಿದರು.

You may also like

News

ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಶೃದ್ಧಾಭಕ್ತಿಯಿಂದ ಶುಭ ಶುಕ್ರವಾರ ಆಚರಣೆ

ಆಧುನಿಕ ಜೀವನದಲ್ಲಿ ನಾವು ಕ್ರಿಸ್ತನಿಗೆ ಯಾವ ರೀತಿಯ ಶಿಲುಬೆಯನ್ನು ನೀಡುತ್ತೇವೆ – ಫಾದರ್ ವಿಜಯ್ ಮಚಾದೊ ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಇಂದು ಎಪ್ರಿಲ್ 18ರಂದು
News

ಯೇಸುವಿನಂತೆ ನಮ್ರತೆ ಹಾಗೂ ಪ್ರೀತಿಯಿಂದ ಸೇವೆ ಸಲ್ಲಿಸಲು ಕರೆ ನೀಡಿದ ಮಂಗಳೂರು ಬಿಷಪ್

ಇಂದು ಕಾಸರಗೋಡಿನ ಬೋವಿಕ್ಕಾನಾ ಚರ್ಚ್ ನಲ್ಲಿ ಬಿಷಪ್ ರಿಂದ ಶುಭ ಶುಕ್ರವಾರ ಹಾಗೂ ನಾಳೆ ಶನಿವಾರ ಮಂಗಳೂರಿನಲ್ಲಿರುವ ರೊಸಾರಿಯೊ ಕಥೆದ್ರಲ್ ನಲ್ಲಿ ಈಸ್ಟರ್ ಹಬ್ಬದ ಆಚರಣೆ ಪರಸ್ಪರ

You cannot copy content of this page