April 21, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ರಾಜ್ಯದ ವಿವಿಧೆಡೆ ಪೊಲೀಸ್ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಪ್ರಾಮಾಣಿಕ ಸೇವೆ ನೀಡಿದ ಮಂಗಳೂರು ನಗರದ ದಕ್ಷ DCP (ಕ್ರೈಂ) ದಿನೇಶ್ ಕುಮಾರ್!

ರಾಜ್ಯದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನೂರಾರು ಪ್ರಕರಣಗಳನ್ನು ಪತ್ತೆ ಹಚ್ಚಿ ಧೀರ ಪೋಲೀಸ್ ಅಧಿಕಾರಿ ಎಂಬ ಪ್ರಶಂಸೆಗೆ ಪಾತ್ರರಾದ ದಿನೇಶ್ ಕುಮಾರ್ ಇವರನ್ನು ಸರಕಾರವು ಮಂಗಳೂರು ನಗರದ DCP (ಕ್ರೈಂ) ಆಗಿ ನೇಮಕಗೊಳಿಸಿ ಮಹತ್ತರ ಕೊಡುಗೆ ನೀಡಿದ್ದು ಅತ್ಯಂತ ಸಮಂಜಸವೆನ್ನಬೇಕು.

‌ಮೂಲತಃ ಕೊಡಗು ಜಿಲ್ಲೆಯ ಮಡಿಕೇರಿಯವರಾದ ದಿನೇಶ್ ಕುಮಾರ್ ಬೆಂಗಳೂರು, ಮೈಸೂರಿನ ಕೆ.ಆರ್. ನಗರ,  ಮಂಡ್ಯ, ಮೂಡಿಗೆರೆ, ಉಡುಪಿ, ಬೈಂದೂರು, ಬ್ರಹ್ಮಾವರ, ಮಲ್ಪೆ, ಕುಂದಾಪುರ, ಮಣಿಪಾಲ ಮತ್ತು ಮಡಿಕೇರಿ ಮೊದಲಾದೆಡೆಗಳಲ್ಲಿ ಎಸ್.ಐ.ಯಾಗಿಯೂ, ಇನ್ಸ್ ಪೆಕ್ಟರ್ ರಾಗಿಯೂ, ಡಿ.ವೈ.ಎಸ್.ಪಿ.ಯಾಗಿಯೂ ಅತ್ಯಂತ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿ ಹೋದಲ್ಲೆಲ್ಲಾ ಶಾಂತಿ- ಸುವ್ಯವಸ್ಥೆಯನ್ನು ಕಾಪಾಡಿದ ಕೀರ್ತಿ ಇವರಿಗೆ ಸಲ್ಲಬೇಕು, ಈ ಸಮರ್ಥ ಅಧಿಕಾರಿಯ ಪ್ರಾಮಾಣಿಕ ಸೇವೆಯನ್ನು ಮನ್ನಿಸಿದ ಸರಕಾರ ಇವರು ಮಡಿಕೇರಿಯಲ್ಲಿ   ಡಿ.ವೈ.ಎಸ್.ಪಿ.ಯಾಗಿದ್ದಾಗ ಇವರನ್ನು ಭಡ್ತಿಗೊಳಿಸಿ ಮಂಗಳೂರು ನಗರದಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಇನ್ನಷ್ಟು ವರ್ಧಿಸಲು ಇವರನ್ನು ಮಂಗಳೂರು ನಗರದ ಅಪರಾಧ ವಿಭಾಗದ DCP ಆಗಿ ಸರಕಾರವು ನೇಮಕಗೊಳಿಸಿದ್ದು ಅತ್ಯಂತ ಸಮಂಜಸವೆನ್ನಬೇಕು. DCP ದಿನೇಶ್ ಕುಮಾರ್ ಇವರಿಗೆ ಸರಕಾರ ಹಾಗೂ ಪೊಲೀಸ್ ಇಲಾಖೆ ಹಲವು ಬಾರಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿದ್ದು ಅಭಿಮಾನಪಡಬೇಕಾದ ವಿಚಾರ.

DCP ದಿನೇಶ್ ಕುಮಾರ್ ಸೇವೆ ಸಲ್ಲಿಸಿದ ಸ್ಥಳಗಳಲ್ಲಿ ಗಲಭೆಗಳಿಲ್ಲ, ಅನ್ಯಾಯ ಅನಾಚಾರಗಳಿಲ್ಲ‌, ಎಲ್ಲಿ ಕೋಮು ಗಲಭೆಯಾಗಿದೆಯೋ, ಎಲ್ಲಿ ದರೋಡೆಯಾಗಿದೆಯೋ ಅಲ್ಲಿಗೆ ತಕ್ಷಣ DCP ದಿನೇಶ್ ಕುಮಾರ್ ಇವರನ್ನು ಸರಕಾರ ನೇಮಕ ಮಾಡುವುದು ವಿಷೇಶತೆ. ಮೊನ್ನೆ ಮಂಗಳೂರು ನಗರದಲ್ಲಿ ಸಂಭವಿಸಿದ ಭೀಕರ ದರೋಡೆಯಂತಹ 3 ಪ್ರಕರಣಗಳ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ DCP ದಿನೇಶ್ ಕುಮಾರ್ ರವರ ಮಾರ್ಗದರ್ಶನವೂ ಇತ್ತು ಎಂಬುವುದು ಒಂದು ಚಾರಿತ್ರಿಕ ಸತ್ಯ. ಇದು ಅವರ ಕಾರ್ಯದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ. ಯಾವುದೇ ಆಡಂಬರಗಳಿಲ್ಲದೆ ಸಂಕಷ್ಟಕ್ಕೊಳಗಾದವರ ಪರವಾಗಿ ಸರಕಾರಕ್ಕೂ ನಾಡಿಗೂ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಅಪರಾಧ ವಿಭಾಗದ DCP ದಿನೇಶ್ ಕುಮಾರ್ ಪೋಲೀಸ್ ಇಲಾಖೆಗೊಂದು ವರದಾನವಾಗಿದ್ದಾರೆ. ಸರಕಾರವು ಅವರ ಪ್ರಾಮಾಣಿಕ ಸೇವೆಯನ್ನು ಮನ್ನಿಸಿ ಅವರನ್ನು ಮಂಗಳೂರು ನಗರದಲ್ಲೇ ಇನ್ನಷ್ಟು ಕಾಲ ಉಳಿಸಿಕೊಳ್ಳ ಬೇಕಾಗಿ ನಗರದ ಜನತೆ ಸರ್ಕಾರವನ್ನು ಹಾಗೂ ಇಲಾಖೆಯನ್ನು ಆಗ್ರಹಿ‌ಸುತ್ತಾರೆ.

  • ಶೇಖ್ ಇಸಾಕ್, ಸಂಪಾದಕರು – ಕಾಕೋ೯ಟಕ ಸಾಪ್ತಾಹಿಕ ಪತ್ರಿಕೆ

You may also like

News

MLC ಐವನ್ ಡಿಸೋಜ ಹಾಗೂ ಕಥೊಲಿಕ್ ಸಭಾ ಕೇಂದ್ರಿಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ರವರಿಂದ ಬಿಷಪ್ಸ್ ಹೌಸ್ ನಲ್ಲಿ ಪೋಪ್ ರವರಿಗೆ ಅಂತಿಮ ನಮನ

ಕ್ರಿಶ್ಚಿಯನ್ನರ ಪರಮೋಚ್ಚ ಜಗದ್ಗುರು ಪೋಪ್ ಫ್ರಾನ್ಸಿಸ್ ರವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಇಂದು ಎಪ್ರಿಲ್ 21ರಂದು ಸೋಮವಾರ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಪೀಟರ್
News

ಜಗದ್ಗುರು ಪೋಪ್ ಫ್ರಾನ್ಸಿಸ್ ಇನ್ನಿಲ್ಲ

ಲ್ಯಾಟಿನ್ ಅಮೆರಿಕದ ಮೊದಲ ಪೋಪ್ ಮತ್ತು ಆಧುನಿಕ ರೋಮನ್ ಕ್ಯಾಥೋಲಿಕ್ ಚರ್ಚ್‌ನಲ್ಲಿ ಪರಿವರ್ತನಾಶೀಲ ವ್ಯಕ್ತಿಯಾಗಿದ್ದ ಜಗದ್ಗುರು ಪೋಪ್ ಫ್ರಾನ್ಸಿಸ್ ಇಂದು ಏಪ್ರಿಲ್ 21ರಂದು ಸೋಮವಾರ ತಮ್ಮ 88

You cannot copy content of this page