ಐಕ್ಯ ವೇದಿಕೆ ಕೊಡಾಜೆ ಇದರ ನೂತನ ಅಧ್ಯಕ್ಷರಾಗಿ ಫಾರೂಕ್ ಗೋಳಿಕಟ್ಟೆ ಆಯ್ಕೆ

ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಕೊಡಾಜೆಯ ಐಕ್ಯ ವೇದಿಕೆಯ ನೂತನ ಅಧ್ಯಕ್ಷರಾಗಿ ಫಾರೂಕ್ ಗೋಳಿಕಟ್ಟೆ ಆಯ್ಕೆಯಾದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಅವರ ಅಧ್ಯಕ್ಷತೆಯಲ್ಲಿ ನಡೆದ ವೇದಿಕೆಯ 2024-25 ನೇ ಸಾಲಿನ ನೂತನ ಸಮಿತಿ ರಚನಾ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಲತೀಫ್ ನೇರಳಕಟ್ಟೆ, ಗೌರವ ಸಲಹೆಗಾರರಾಗಿ ಗುಲ್ಜಾರ್ ರಝಾಕ್ ಅನಂತಾಡಿ ಅವರನ್ನು ಆರಿಸಲಾಯಿತು.
ಉಪಾಧ್ಯಕ್ಷರುಗಳಾಗಿ ಅಶ್ರಫ್ ಭಾರತ್ ಕಾರ್ಸ್, ರಫೀಕ್ ಎಸ್.ಎಸ್. ಕೊಡಾಜೆ, ಪ್ರಧಾನ ಕಾರ್ಯದರ್ಶಿ ಶರೀಫ್ ಅನಂತಾಡಿ, ಜೊತೆ ಕಾರ್ಯದರ್ಶಿಗಳಾಗಿ ಆದಂ ಎಸ್.ಎಂ.ಎಸ್., ಅಶ್ರಫ್ ನೇರಳಕಟ್ಟೆ, ಕೋಶಾಧಿಕಾರಿ ರಿಯಾಝ್ ನೇರಳಕಟ್ಟೆ, ಪತ್ರಿಕಾ ಕಾರ್ಯದರ್ಶಿಗಳಾಗಿ ನೌಫಳ್ ಕೊಡಾಜೆ, ಸಲೀಂ ಮಾಣಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಮನ್ಸೂರ್ ನೇರಳಕಟ್ಟೆ, ಇಮ್ತಿಯಾಜ್ ಕೊಡಾಜೆ, ರಫೀಕ್ ಪಂತಡ್ಕ, ಕ್ರೀಡಾ ಕಾರ್ಯದರ್ಶಿಗಳಾಗಿ ಫಾರೂಕ್ ಕೊಡಾಜೆ, ಹಫೀಝ್ ಭಗವಂತಕೋಡಿ, ಸಮ್ಮಾಸ್ ನೇರಳಕಟ್ಟೆ, ಆರೋಗ್ಯ ಕಾರ್ಯದರ್ಶಿಗಳಾಗಿ ಹನೀಫ್ ಪಂತಡ್ಕ, ಸಲೀಂ ಪರ್ಲೊಟ್ಟು, ಯೂಸುಫ್ ಕೊಡಾಜೆ, ಶೈಕ್ಷಣಿಕ ಕಾರ್ಯದರ್ಶಿಗಳಾಗಿ ಮಸೂದ್ ಎಸ್.ಎಸ್. ಕೊಡಾಜೆ, ಮಜೀದ್ ಅನಂತಾಡಿ, ಮುಸ್ತಫಾ ಪಂತಡ್ಕ ಹಾಗೂ ಸಾಮಾಜಿಕ ಕಾರ್ಯದರ್ಶಿಗಳಾಗಿ ಫಾರೂಕ್ ಪಂತಡ್ಕ, ಅಬೂಬಕ್ಕರ್ (ಅಬ್ಬು) ಪಂತಡ್ಕ ಅವರು ಆಯ್ಕೆಯಾದರು. ನೂತನ ಕಾರ್ಯದರ್ಶಿ ಶರೀಫ್ ಅನಂತಾಡಿ ಸ್ವಾಗತಿಸಿ, ವಂದಿಸಿದರು.