ಉಳ್ಳಾಲ ವಲಯ ಕಾಂಗ್ರೆಸ್ ವತಿಯಿಂದ ಸನ್ಮಾನ ಸ್ವೀಕರಿಸಿದ AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜಾ ಪಾನೀರ್

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಕ್ಟೋಬರ್ 22ರಂದು ಮಂಗಳವಾರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ AICU ಚುನಾವಣೆಯಲ್ಲಿ ಬಹುಮತದಿಂದ ರಾಜ್ಯಾಧಕ್ಷರಾಗಿ ಚುನಾಯಿತರಾದ ಹಾಗೂ ಮಂಗಳೂರು ಧರ್ಮಕ್ಷೇತ್ರದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧಕ್ಷ ಅಲ್ವಿನ್ ಡಿಸೋಜಾ ಪಾನೀರ್ ಇವರನ್ನು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತಾನಾಡಿದ ಆಲ್ವಿನ್ ಡಿಸೋಜಾ ಪಾನೀರ್, “ನನಗೆ ಇದು ಒಂದು ಜನರು ಕೊಟ್ಟ ವರ ಬಯಸದೆ ಬಂದ ಭಾಗ್ಯ. ನನ್ನ ಕೈಲಾದಷ್ಟು ಸೇವೆಯನ್ನು ವಿವಿಧ ಸಂಘಟನೆಯ ಮುಖಾಂತರ ನೀಡುತ್ತಾ ಬಂದಿರುತ್ತೇನೆ. ಮುಂದಿನ ದಿನಗಳಲ್ಲಿ ದೇವರ ಆಶಿರ್ವಾದದಿಂದ ಹಾಗೂ ನಿಮ್ಮ ಸಹಕಾರದಿಂದ ಸಮಜಗೋಸ್ಕರ ದುಡಿಯುತ್ತೇನೆ” ಎಂದು ಹೇಳಿದರು. ಸನ್ಮಾನವನ್ನು ನೀಡಿದಕ್ಕಾಗಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಕಾರ್ಯಕರ್ತರಿಗೆ ಕ್ರತಜ್ಞತೆಯನ್ನು ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೊಳಿಯಾರ್, ಮೂಡದ ಅಧ್ಯಕ್ಷ ಸದಾಶಿವ ಉಳ್ಳಾಲ, ತಾಲುಕು ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ರೈ, ಮುನ್ನೂರು ಗ್ರಾಮ ಪಂಚಾಯತ್ ಮಾಜಿ ಅಧಕ್ಷರಾದ ವಿಲ್ಫೇಡ್ ಡಿಸೋಜಾ, ಆಶ್ರಫ್ ಕೆ.ಸಿ. ರೋಡ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾದ ಚಂದ್ರಿಕಾ ರೈ, ಮನ್ಸೂರು ಹಾಗೂ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಹಾಜರಿದ್ದರು.