ರೈತ ಸಂಘ ಬಂಟ್ವಾಳ ತಾಲೂಕು ಘಟಕದ ಪುನರ್ರಚನೆ ಹಾಗೂ ಅಮ್ಟಾಡಿ ಗ್ರಾಮ ಘಟಕ ಉದ್ಘಾಟನೆ
ಬಂಟ್ವಾಳ : ರೈತ ಸಂಘ ಬಂಟ್ವಾಳ ತಾಲೂಕು ಘಟಕದ ಪುನರ್ರಚನೆ ಹಾಗೂ ನೂತನವಾಗಿ ಅಮ್ಟಾಡಿ ಗ್ರಾಮ ಘಟಕದ ಉದ್ಘಾಟನೆಯು ಅಮ್ಡಾಡಿ ಗ್ರಾಮದ ಅಂಭೇಡ್ಕರ್ ಭವನದಲ್ಲಿ ಇತ್ತೀಚೆಗೆ ನಡೆಯಿತು. ಸಂಘದ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿಯ ಖಾಯಂ ಆಹ್ವಾನಿತರಾದ ಸನ್ನಿ ಡಿಸೋಜ ನೀರುಮಾರ್ಗ, ಎ.ಐ.ಟಿ.ಯು.ಸಿ. ರಾಜ್ಯ ಸಮಿತಿ ಸದಸ್ಯ ಹಾಗೂ ಜಿಲ್ಲಾಧ್ಯಕ್ಷ (ಕಾರ್ಮಿಕ ಸಂಘಟನೆ) ರಾಮಣ್ಣ ವಿಟ್ಲ, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಡಿ.ಕೆ. ಹಮೀದ್ ಕನ್ಯಾನ, ಜಿಲ್ಲಾ ಉಪಾಧ್ಯಕ್ಷ ಅಲ್ವೀನ್ ಮೀನೆಜಸ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಿತು.
ಬಂಟ್ವಾಳ ತಾಲೂಕು ಘಟಕದ ಗೌರವಾಧ್ಯಕ್ಷರಾಗಿ ಅಲ್ವೀನ್ ಲೋಬೋ, ಅಧ್ಯಕ್ಷರಾಗಿ ಸದಾನಂದ ಶೀತಲ್, ಪ್ರಧಾನ ಕಾರ್ಯದರ್ಶಿಯಾಗಿ ಆಲೆಕ್ಸ್ ರೊಡ್ರಿಗಸ್, ಉಪಾಧ್ಯಕ್ಷರಾಗಿ ದಾಮೋದರ ಶೆಟ್ಟಿ ಹಾಗೂ ಸಂಜೀವ ಶೆಟ್ಟಿ, ಕೋಶಾಧಿಕಾರಿಯಾಗಿ ಅಲ್ವೀನ್ ಡಿಸೋಜ, ಸಂಘಟನಾ ಕಾರ್ಯದರ್ಶಿಯಾಗಿ ನವೀನ್ ಡಿಸೋಜ ಆಯ್ಕೆಯಾದರು.
ನೂತನ ಅಮ್ಟಾಡಿ ಗ್ರಾಮ ಘಟಕದ ಅಧ್ಯಕ್ಷರಾಗಿ ಜೀವನ್ ಲೋಬೋ, ಪ್ರಧಾನ ಕಾರ್ಯದರ್ಶಿಯಾಗಿ ಲೋಕೇಶ್ ಸುವರ್ಣ, ಜತೆ ಕಾರ್ಯದರ್ಶಿಯಾಗಿ ಅರುಣ್ ಪಿಂಟೋ, ಉಪಾಧ್ಯಕ್ಷರುಗಳಾಗಿ ವಲೇರಿಯನ್ ಡಿಸೋಜ, ಗ್ರೇಸಿ ಮೊಂತೆರೊ, ನವೀನ್ ಡಿಸೋಜ, ಕೋಶಾಧಿಕಾರಿಯಾಗಿ ಕಿರಣ್ ಪಿಂಟೋ, ಸಂಘಟನಾ ಕಾರ್ಯದರ್ಶಿಯಾಗಿ ಸುನೀಲ್ ಕುಮಾರ್ ಆಯ್ಕೆಯಾದರು.