ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿಯಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಬಾಲಕ – ಬಾಲಕಿಯರ “ಕ್ರೀಡಾಕೂಟ 2024-25”
ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಬಂಟ್ವಾಳ, ಕಲ್ಲಡ್ಕ ವಲಯ ಕ್ರೀಡಾಕೂಟ ಸಮಿತಿ ಹಾಗೂ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ಮಾಣಿ, ಇವುಗಳ ಸಂಯುಕ್ತ ಆಶ್ರಯದಲ್ಲಿ 14 ರಿಂದ 17 ವಯೋ ಮಿತಿಯೊಳಗಿನ ಬಾಲಕ – ಬಾಲಕಿಯರ ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳ “ಕ್ರೀಡಾಕೂಟ 2024-25” ಅಕ್ಟೋಬರ್ 28 ಮತ್ತು 29ರಂದು ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲೆ ವಿದ್ಯಾನಗರ ಪೆರಾಜೆ ಮಾಣಿ ಇಲ್ಲಿ ಬೆಳಿಗ್ಗೆ 9:30 ರಿಂದ ನಡೆಯಲಿರುವುದು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ತಾಲೂಕು ತಹಶೀಲ್ದಾರಾದ ಶ್ರೀಮತಿ ಅರ್ಚನಾ ಡಿ. ಭಟ್ ವಹಿಸಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಮಾಣಿಯ ಬಾಲವಿಕಾಸ ಟ್ರಸ್ಟ್ ಇದರ ಅಧ್ಯಕ್ಷ ಪ್ರಹ್ಲಾದ್ ಶೆಟ್ಟಿ ಜೆ. ಮಾಡಲಿರುವರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಎಮ್. ಜಿ., ಶ್ರೀ ಮಂಜುನಾಥ ಕೃಪ ಹೋಟೆಲ್ ಪ್ರೈ(ಲಿ.) ಮುಂಬೈನ ಮುಂಡಪ್ಪ ಎಸ್. ಪಯ್ಯಾಡೆ, ದಕ್ಷಿಣ ಕನ್ನಡ ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣ ಅಧೀಕ್ಷಕ ಗೋಪಾಲ್ ಎಚ್. ಎ., ಲಯನ್ಸ್ ಕ್ಲಬ್ ಮಾಣಿ ಇದರ ಸ್ಥಾಪಕ ಅಧ್ಯಕ್ಷ ಗಂಗಾಧರ ರೈ ತುಂಗೇರಕೋಡಿ ಮೊದಲಾದವರು ಉಪಸ್ಥಿತರಿರುವರು.
ಕ್ರೀಡಾಕೂಟಗಳು ನಿಗದಿತ ಸಮಯಕ್ಕೆ ಸರಿಯಾಗಿ ನಡೆಯಲಿರುವುದರಿಂದ ಬಂಟ್ವಾಳ ತಾಲೂಕಿನ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ವಿದ್ಯಾರ್ಥಿಗಳನ್ನು ಆಯಾ ಶಾಲಾ ಶಿಕ್ಷಕರು ಕ್ಲಪ್ತ ಸಮಯದಲ್ಲಿ ಇರುವಂತೆ ನೋಡಿಕೊಂಡು ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕಾಗಿ ಕ್ರೀಡಾಕೂಟದ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.