ಅಕ್ಟೋಬರ್ 27ರಂದು ಕೊಡಾಜೆ ಐಕ್ಯ ವೇದಿಕೆ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ
ಬಂಟ್ವಾಳ : ಐಕ್ಯ ವೇದಿಕೆ ಕೊಡಾಜೆ ಇದರ ವತಿಯಿಂದ ಕೊಡಾಜೆ ಖಬರಸ್ತಾನ್ ವಠಾರದಲ್ಲಿ ಸ್ವಚ್ಚತಾ ಕಾರ್ಯಕ್ರಮ ಅಕ್ಟೋಬರ್ 27ರಂದು ನಡೆಯಲಿದೆ. ಕಾರ್ಯಕ್ರಮವನ್ನು ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬರಾದ ಅಬ್ದುಲ್ ಅಝೀಝ್ ದಾರಿಮಿ ಪೊನ್ಮಳ ಉದ್ಘಾಟಿಸಲಿದ್ದು, ಐಕ್ಯ ವೇದಿಕೆಯ ಅಧ್ಯಕ್ಷ ಫಾರೂಕ್ ಗೋಳಿಕಟ್ಟೆ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಕೊಡಾಜೆ ಬಿ.ಜೆ.ಎಂ. ಅಧ್ಯಕ್ಷ ಹಾಜಿ ಇಬ್ರಾಹಿಂ ರಾಜ್ ಕಮಲ್, ಕೋಶಾಧಿಕಾರಿ ಹಾಜಿ ಮುಹಮ್ಮದ್ ರಫೀಕ್ ಸುಲ್ತಾನ್, ಕಾರ್ಯದರ್ಶಿ ನವಾಝ್ ಭಗವಂತ ಕೋಡಿ, ಕೊಡಾಜೆ ಮಸೀದಿ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಹಾಜಿ ಫಾರೂಕ್ ಸುಲ್ತಾನ್, ಕೋಶಾಧಿಕಾರಿ ಹಾಜಿ ಉಮ್ಮರ್ ರಾಜ್ ಕಮಲ್, ಕಾರ್ಯದರ್ಶಿ ಯೂಸುಫ್ ಸಹೀದ್ ಹಾಗೂ ಕೊಡಾಜೆ ತರ್ಬಿಯತುಲ್ ಇಸ್ಲಾಂ ಮದ್ರಸ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಜಿ ರಹೀಂ ಸುಲ್ತಾನ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ವೇದಿಕೆಯ ಪತ್ರಿಕಾ ಕಾರ್ಯದರ್ಶಿಗಳಾದ ನೌಫಳ್ ಕೊಡಾಜೆ ಹಾಗೂ ಸಲೀಂ ಮಾಣಿ ಜಂಟಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.