ಕಲ್ಲಡ್ಕ ಗೊಳ್ತಮಜಲ್ ಸಮೀಪದ ಮಾಣಿಮಜಲ್ ನಿವಾಸಿ ಅಮರ್ ಬೀಡಿ ಮಾಲಕ ಯೂಸುಫ್ ಹಾಜಿ ನಿಧನ

ಬಂಟ್ವಾಳ ; ಕಲ್ಲಡ್ಕ ಗೊಳ್ತಮಜಲ್ ಸಮೀಪದ ಮಾಣಿಮಜಲ್ ನಿವಾಸಿ ಅಮರ್ ಬೀಡಿ ಮಾಲಕ ಯೂಸುಫ್ ಹಾಜಿ (70) ಅಲ್ಪಕಾಲದ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಕ್ಟೋಬರ್ 28ರಂದು ಸೋಮವಾರ ರಾತ್ರಿ ನಿಧನರಾದರು. ಗೊಳ್ತಮಜಲ್ ರಹ್ಮಾನಿಯಾ ಜುಮಾ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷರಾಗಿ, ಕಲ್ಲಡ್ಕ ಕೇಂದ್ರ ಮುಹಿಯುದ್ದೀನ್ ಜುಮಾ ಮಸೀದಿ ಆಡಳಿತ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಮೂವರು ಪುತ್ರರು, ನಾಲ್ವರು ಪುತ್ರಿಯರು ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.