ಚಿತ್ರದುರ್ಗದಲ್ಲಿ ನಡೆದ 19ನೇ ಕರ್ನಾಟಕ ರಾಜ್ಯ ಮಟ್ಟದ ಅಬಾಕಸ್ ಮತ್ತು ಮಾನಸಿಕ ಅಂಕಗಣಿತ ಸ್ಪರ್ಧೆ 2024

ಬೆಳುವಾಯಿಯ ಮರಿಯಂ ನಿಕೆತನ್ ಆಂಗ್ಲ ಮಾಧ್ಯಮ ಶಾಲೆಗೆ ಕೀರ್ತಿ ತಂದು ಕೊಟ್ಟ 15 ವಿದ್ಯಾರ್ಥಿಗಳು
ಅಕ್ಟೋಬರ್ 27ರಂದು ಆದಿತ್ಯವಾರ “19ನೇ ಕರ್ನಾಟಕ ರಾಜ್ಯ ಅಬಾಕಸ್ ಸ್ಪರ್ಧೆ 2024” ಚಿತ್ರದುರ್ಗದಲ್ಲಿ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಬೆಳುವಾಯಿಯ ಮರಿಯ0 ನಿಕೆತನ್ ಆಂಗ್ಲ ಮಾಧ್ಯಮ ಶಾಲೆಯ 15 ವಿದ್ಯಾರ್ಥಿಗಳು ಪಾಲ್ಗೊಂಡು ಬಹುಮಾನಗಳನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದು ಕೊಟ್ಟಿದ್ದಾರೆ.
ಬಹುಮಾನಗಳನ್ನು ಪಡೆದ ಎಲ್ಲಾ ವಿಜೇತ ವಿದ್ಯಾರ್ಥಿಗಳಿಗೆ ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಜೆಸಿಂತಾ ಲಸ್ರಾದೊ, ಶಾಲಾ ಶಿಕ್ಷಕ ವೃಂದ ಹಾಗೂ ಶಾಲಾ ಆಡಳಿತ ಮಂಡಳಿ ಮತ್ತು ಪೋಷಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.