February 12, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಳ್ಳತನ ನಡೆಸುತ್ತಿದ್ದ ಕುಖ್ಯಾತ ಖದೀಮರಿಬ್ಬರನ್ನು ಬಂಧಿಸಿದ ವಿಟ್ಲ ಪೊಲೀಸರು

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕಳವು ಪ್ರಕರಣಗಳ ಪತ್ತೆಯಲ್ಲಿ ತೊಡಗಿದ್ದ ವಿಟ್ಲ ಠಾಣಾ ಅಪರಾಧ ತಂಡದ ಸಿಬ್ಬಂದಿಗಳು 29ರಂದು ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಮಾಣಿ ಜಂಕ್ಷನ್ ನಲ್ಲಿ ಇಬ್ಬರು ಕಳ್ಳರನ್ನು ಬಂಧಿಸಿದ್ದು ವಿಚಾರಿಸಲಾಗಿ ವಿಟ್ಲ ಠಾಣೆಯ ಮಿತ್ತೂರು, ಕೊಡಾಜೆ ಮನೆ ಕಳವು ಎರಡು ಪ್ರಕರಣಗಳಲ್ಲಿ ಹಾಗೂ ಪುತ್ತೂರು ನಗರ ಠಾಣಾ ವ್ಯಾಪ್ತಿಯ ಶಾಲೆ ಹಾಗೂ ಪುತ್ತೂರು ನಗರ ಠಾಣಾ ವ್ಯಾಪ್ತಿಯ ಶಾಲೆ ಹಾಗೂ ಅಂಗನವಾಡಿ ಕಳವು ಈ ಎರಡು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.

ಉಳ್ಳಾಲ ತಾಲೂಕು ಬೋಳಿಯಾರು ಗ್ರಾಮದ ಮಹಮ್ಮದ್ ರಿಯಾಜ್ ಧರ್ಮನಗರ ನಿವಾಸಿ ಹಸನಬ್ಬ ಪುತ್ರ ಮಹಮ್ಮದ್ ರಿಯಾಜ್ ಹಸನಬ್ಬ ಮತ್ತು ಉಳ್ಳಾಲ ಹಳೆಕೋಟೆ ನಿವಾಸಿ ಅಬ್ದುಲ್ ರಹಿಮಾನ್ ಪುತ್ರ ಮೊಹಮ್ಮದ್ ಇಂತಿಯಾಜ್ ಬಂಧಿತ ಖದೀಮರು. ಆರೋಪಿಗಳ ಪೈಕಿ ಮಹಮ್ಮದ್ ರಿಯಾಜ್ ಹಸನಬ್ಬ ಎಂಬಾತನ ವಿರುದ್ದ ಕೇರಳದ ಕುಂಬಳೆ ಹಾಗೂ ಮಂಗಳೂರು ನಗರ, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ಈ ಹಿಂದೆ ದಾಖಲಾಗಿವೆ.

ಬಂಧಿತರ ತೀವ್ರ ವಿಚಾರಣೆ ನಡೆಸಿದಾಗ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ವಿಟ್ಲ ಪೊಲೀಸು ಠಾಣಾ ಅ.ಕ್ರ:163/2024 ಕಲಂ:331(3), 331(4), 305 BNS-2023, ಅ.ಕ್ರ:166/2024 ಕಲಂ:331(3), 331(4), 305 BNS-2023, ಪುತ್ತೂರು ನಗರ ಪೊಲೀಸ್ ಠಾಣಾ ಅ.ಕ್ರ. 95/2024 ಕಲಂ: 331(3), 331(4), 305 BNS – 2023, ಅ.ಕ್ರ:96/2024, ಕಲಂ:331(3), 331(4), 305 BNS-2023 ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳಿಂದ 1 ಲಕ್ಷದ 35 ಸಾವಿರ ರೂಪಾಯಿ ಮೌಲ್ಯದ ಗ್ಯಾಸ್ ಸಿಲಿಂಡರ್, ಮನೆ ಸಾಮಗ್ರಿಗಳು, ಹಾಗೂ ಕಳ್ಳತನಕ್ಕೆ ಉಪಯೋಗಿಸಿದ KA 19 AD 0585 ನೋಂದಣಿ ನಂಬರಿನ ಅಟೋ ರಿಕ್ಷಾ – 01 ಇದರ ಅಂದಾಜು ಮೌಲ್ಯ ಒಂದು ಲಕ್ಷದ ಐವತ್ತು ಸಾವಿರ ರೂಪಾಯಿ ಆಗಿದ್ದು ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಎರಡೂ ಲಕ್ಷದ ಎಂಬತ್ತೈದು ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.

ಆರೋಪಿಗಳ ಪತ್ತೆ ಕಾರ್ಯಾಚರಣೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಎನ್. ಐಪಿಎಸ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಂದ್ರ ಡಿ. ಎಸ್. ಇವರ ಮಾರ್ಗದರ್ಶನದಂತೆ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಧೀಕ್ಷಕ ಎಸ್. ವಿಜಯ ಪ್ರಸಾದ್ ಇವರ ನಿರ್ದೇಶನದಂತೆ, ವಿಟ್ಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಶ್ರೀ ನಾಗರಾಜ್ ಹೆಚ್. ಇವರ ನೇತ್ರತ್ವದಲ್ಲಿ ಪೊಲೀಸ್ ಉಪನಿರೀಕ್ಷರ ವಿದ್ಯಾ ಕೆ.ಜೆ., ರತ್ನಕುಮಾರ್, ಕೌಶಿಕ್ ಸಿಬ್ಬಂಧಿಗಳಾದ ಉದಯ ರೈ, ರಾಧಾಕೃಷ್ಣ, ರಕ್ಷಿತ್ ರೈ, ಶ್ರೀಧರ ಸಿ.ಎಸ್., ಕೃಷ್ಣ ನಾಯ್ಕ್, ಗದಿಗೆಪ್ಪ ಕಲ್ಲೂರ, ಶಂಕರ ಶಂಶಿ, ಮನೋಜ್, ಸತೀಶ್, ಗಣಕಯಂತ್ರ ವಿಭಾಗದ ಸಂಪತ್, ದಿವಾಕರ್ ಭಾಗವಹಿಸಿರುತ್ತಾರೆ.

You may also like

News

 ಗೆಳೆಯರ ಬಳಗ ಕಲ್ಮಂಜ ಇದರ ರಜತ ಸಂಭ್ರಮ ಕಾರ್ಯಕ್ರಮ

ಗೆಳೆಯರ ಬಳಗ ಅಕ್ಷಯನಗರ (ರಿ.) ನಿಡಿಗಲ್ ಕಲ್ಮಂಜ ಇದರ ರಜತ ಸಂಭ್ರಮ ಕಾರ್ಯಕ್ರಮವು ಫೆಬ್ರವರಿ 9ರಂದು ಆದಿತ್ಯವಾರ ಕಲ್ಮಂಜ ಗ್ರಾಮದ ಅಕ್ಷಯನಗರದ ಕ್ರೀಡಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.
News

CELEBRATION OF THE FEAST OF OUR LADY OF LOURDES at Lourdes central School, Bejai, Mangalore

“Let us run to Mary and as her little children cast ourselves into her arms with a perfect confidence.”  —St.

You cannot copy content of this page