November 11, 2024
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರು ಕಾಂಗ್ರೆಸ್ ಭವನದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮ

ಮಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 20 ಅಂಶದ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದರು ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ. ರಮಾನಾಥ ರೈ ಹೇಳಿದ್ದಾರೆ.

ಮಂಗಳವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಬಳಿಕ ಅವರು ಮಾತನಾಡಿದರು. ಇಂದಿರಾ ಗಾಂಧಿ ಅವರು ದೇಶದ ಸಾಮಾಜಿಕ ಸಾಮರಸ್ಯ ಉಳಿವಿಗಾಗಿ ಮತೀಯ ರಾಜಕೀಯ ಶಕ್ತಿಗಳ ವಿರುದ್ಧ ಹೋರಾಡಿದರು. ಸಾಮಾಜಿಕ ನ್ಯಾಯದಿಂದ ವಂಚಿತರಾದ ಬಡವರು, ಶೋಷಿತರು, ದಮನಿತರಿಗೆ ಧ್ವನಿಯಾದರು.

ದೇಶದ ಏಕತೆಯ ದೃಷ್ಟಿಯಿಂದ ಅವರು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು. ಹಸಿರು ಕ್ರಾಂತಿ, ಶ್ವೇತ ಕ್ರಾಂತಿ, ನೀಲ ಕ್ರಾಂತಿ, ಜೀತ ಪದ್ಧತಿ ನಿರ್ಮೂಲನೆ, ರಾಜಧನ ರದ್ಧತಿ, ಬಾಂಗ್ಲಾ ವಿಮೋಚನೆ, ಬ್ಯಾಂಕುಗಳ ರಾಷ್ಟ್ರೀಕರಣ, ಕೃಷಿ ಯೋಜನೆಗೆಳಿಗೆ ಆದ್ಯತೆ ನೀಡಿ ಜನ ಸಾಮಾನ್ಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕಾರಣರಾದರು. ಬಡತನ, ಅಸಮಾನತೆ ನಿರ್ಮೂಲನೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ದೇಶದ ಬೆಳವಣಿಗೆಗೆ ಇಂದಿರಾ ಗಾಂಧಿ ಸಹಕಾರಿಯಾದರು ಎಂದು ಸ್ಮರಿಸಿದರು.

ರಾಜ್ಯಸಭಾ ಮಾಜಿ ಸದಸ್ಯ ಬಿ. ಇಬ್ರಾಹೀಂ ಮಾತನಾಡಿ, ಇಂದಿರಾ ಗಾಂಧಿ ಅವರು ದೇಶದ ಐಕ್ಯತೆ, ಸಮಗ್ರತೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ದೇಶದ ಅಭಿವೃದ್ಧಿಯಲ್ಲಿ ಅವರ ಪಾತ್ರ ಮಹತ್ತರವಾಗಿದೆ. ಬಡಜನರ ಬಗೆಗಿನ ಕಾಳಜಿ, ದೇಶದ ಸ್ಥಿತಿಗತಿಗಳ ಸುಧಾರಣೆಗಾಗಿ ಕೈಗೊಂಡ ದಿಟ್ಟ ಕ್ರಮಗಳು ಇಂದಿರಾ ಗಾಂಧಿಯವರನ್ನು ಇಂದಿಗೂ ಜೀವಂತವಾಗಿರಿಸಿದೆ ಎಂದು ಬಣ್ಣಿಸಿದರು. ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಇಂದಿರಾ ಗಾಂಧಿ ಅವರಿಂದ ಕರ್ನಾಟಕಲ್ಲಿ ಕಾಂಗ್ರೆಸ್ ಬಲ ವೃದ್ಧಿಯಾಯಿತು. ಅವರ ಕೊಡೆಗೆಯನ್ನು ಜನರು ಮರೆತಿಲ್ಲ. ಜನರಲ್ಲಿ ಅವರನ್ನು ನೆನಪಿಸುವ ಕಾರ್ಯ ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೊ, ಲೋಕಸಭಾ ಅಭ್ಯರ್ಥಿ ಪದ್ಮರಾಜ್, ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಮಾತನಾಡಿದರು. ಮುಖಂಡರಾದ ಕೆ. ಹರಿನಾಥ್, ಕೆ.ಪಿ. ಥೋಮಸ್, ಅಬ್ದುಲ್ ರವೂಫ್, ಲ್ಯಾನ್ಸ್ ಲೋಟೊ ಪಿಂಟೊ, ಕೆ. ಅಶ್ರಫ್, ಜೆ. ಅಬ್ದುಲ್ ಸಲೀಂ, ನವೀನ್ ಡಿಸೋಜ, ಟಿ. ಹೊನ್ನಯ್ಯ, ಶುಭೋದಯ ಆಳ್ವ, ಟಿ. ಕೆ. ಸುಧೀರ್, ವಿಶ್ವಾಸ್ ಕುಮಾರ್ ದಾಸ್, ಡಾ. ಶೇಖರ್ ಪೂಜಾರಿ, ಟಿ. ಡಿ. ವಿಕಾಸ್ ಶೆಟ್ಟಿ, ಯು. ಟಿ. ಫರ್ಝಾನ, ಕೆ. ಅಪ್ಪಿ, ಸಬಿತಾ ಮಿಸ್ಕಿತ್, ಶಬ್ಬೀರ್ ಸಿದ್ದಕಟ್ಟೆ, ಯೋಗಿಶ್ ಕದ್ರಿ, ಪ್ರೇಮ್ ಬಳ್ಳಾಲ್ ಭಾಗ್, ಲಕ್ಷ್ಮೀ ನಾಯರ್, ಗೀತಾ ಅತ್ತಾವರ ಕವಿತಾ ವಾಸು, ಚಂದ್ರಕಲಾ ಜೋಗಿ, ರೂಪಾ ಚೇತನ್, ಆರಿಫ್ ಬಂದರ್, ವಹಾಬ್ ಕುದ್ರೋಳಿ, ಜಿ. ಎ. ಜಲೀಲ್, ಹೈದರ್ ಬೋಳಾರ್, ಆಲ್ವಿನ್ ಪ್ರಕಾಶ್, ಜಾರ್ಜ್, ರವಿ ಪೂಜಾರಿ ಕೋಡಿಕಲ್ ಮತ್ತಿತರರು ಉಪಸ್ಥಿತರಿದ್ದರು. ಕೆ. ಕೆ. ಶಾಹುಲ್ ಹಮೀದ್ ಸ್ವಾಗತಿಸಿದರು. ಮಾಜಿ ಮೇಯರ್ ಶಶಿಧರ್ ಹೆಗ್ಡೆ ವಂದಿಸಿದರು.

You may also like

News

ಕರಾವಳಿ ಸುದ್ದಿ ನೂತನ ವೆಬ್ ಸೈಟ್ ಉದ್ಘಾಟನೆ

  ಬಂಟ್ವಾಳ : ಕರಾವಳಿ ಸುದ್ದಿ ವಾರಪತ್ರಿಕೆಯ ನೂತನ ವೆಬ್ ಸೈಟ್ www.karavalisuddi.com ಸಪ್ಟೆಂಬರ್ 8ರ ಭಾನುವಾರ ಲೋಕಾರ್ಪಣೆಗೊಂಡಿತು. ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನ ಧರ್ಮಗುರು
News

ಸೂರಿಕುಮೇರು ಚರ್ಚ್ ನಲ್ಲಿ ಸಂಭ್ರಮದ ಮೊಂತಿ ಹಬ್ಬ ಆಚರಣೆ

ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್ ನಲ್ಲಿ ಮೇರಿ ಮಾತೆಯ ವಾರ್ಷಿಕ ಹಬ್ಬ ಮೊಂತಿ ಹಬ್ಬವನ್ನು ಇಂದು ಸಪ್ಟಂಬರ್ 8ರಂದು ವಿಜೃಂಭಣೆ, ಸಂಬ್ರಮ, ಭಕ್ತಿ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಯಿತು.

You cannot copy content of this page