ಜ್ಞಾನದ ಬೆಳಕು ಹರಿಸಿದ ಮಹಾನ್ ಸಂತ ನಾರಾಯಣಗುರುಗಳು – ಹರೀಶ್ ಎಸ್. ಕೋಟ್ಯಾನ್
ಕಲ್ಲಡ್ಕ : ಜ್ಞಾನದ ಬೆಳಕು ಮನವನ್ನು ಬೆಳಗಿದರೆ, ದೀಪದ ಬೆಳಕು ಮನೆಯನ್ನು ಬೆಳಗುವುದು. ಶಿಕ್ಷಣದಿಂದ ಮಾತ್ರ ಬಡತನ ಮತ್ತು ಅಸ್ಪೃಶ್ಯತೆ ನಿರ್ಮೂಲನೆ ಸಾಧ್ಯ ಎಂದು ಪ್ರತಿಪಾದಿಸಿದ ನಾರಾಯಣಗುರುಗಳು ಜ್ಞಾನದ ಬೆಳಕು ನೀಡಿದ ಮಹಾನ್ ಸಂತ ಎಂದು ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ಹರೀಶ್ ಎಸ್. ಕೋಟ್ಯಾನ್ ತಿಳಿಸಿದರು.
ಅವರು ಅಕ್ಟೋಬರ್ 31ರಂದು ಗುರುವಾರ ಬಂಟ್ವಾಳ ತಾಲೂಕಿನ ಕಲ್ಲಡ್ಕ ನರಹರಿ ನಗರ ಜಗದೀಶ್ ಸುವರ್ಣ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 18ರ ಕಾರ್ಯಕ್ರಮದಲ್ಲಿ ಗುರುಸಂದೇಶ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಗೊಳ್ತಮಜಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರೇಮ, ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ನಾರಾಯಣ ಗುರುತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ, ಆರೋಗ್ಯ ನಿರ್ದೇಶಕ ಮಹೇಶ್ ಬೊಳ್ಳಾಯಿ, ಮಾಜಿ ಅಧ್ಯಕ್ಷರಾದ ನಾಗೇಶ್ ಪೊನ್ನೋಡಿ, ಪ್ರೇಮನಾಥ್ ಕರ್ಕೇರ, ಶಿವಾನಂದ ಎಂ., ಸದಸ್ಯರಾದ ಪ್ರಶಾಂತ್ ಏರಮಲೆ, ನಾಗೇಶ್ ಏಲಬೆ, ಚಿನ್ನಾ ಕಲ್ಲಡ್ಕ, ಸುನಿತಾ ನಿತಿನ್ ಮಾರ್ನಬೈಲ್, ಸುನೀಲ್ ಸುವರ್ಣ ಮರ್ದೊಲಿ, ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಪುರಸ್ಕೃತ ಶಿಕ್ಷಕಿ ರೇಖಾ ಸಿ.ಹೆಚ್., ರಾಕ್ ಲೈನ್ ಸುಂದರ ಬಂಗೇರ ನರಹರಿ, ಜಗದೀಶ್ ಸುವರ್ಣರ ಬಂಧುಮಿತ್ರರು ಉಪಸ್ಥಿತರಿದ್ದರು. ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ ವಂದಿಸಿದರು.