ಸೂರಿಕುಮೇರು ನಿವಾಸಿ ಅಬುಬಕ್ಕರ್ ನಿಧನ

ಸೂರಿಕುಮೇರು ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಸೂರಿಕುಮೇರು ನಿವಾಸಿಯಾಗಿರುವ ಮುಹಮ್ಮದ್ ನವಾಝ್, ಮತ್ತು ನೌಫಾನ್ ಅಹಮ್ಮದ್ ರವರ ತಂದೆ ಹಾಗೂ ಸುಲೈಮಾನ್, ಉಮ್ಮರ್ ಮತ್ತು ಅದಮ್ ರವರ ಸಹೋದರ ಅಬುಬಕ್ಕರ್ ಅನಾರೋಗ್ಯದಿಂದ ಇದ್ದು ಇದೀಗ ನವಂಬರ್ 1ರಂದು ಅವರ ಸೂರಿಕುಮೇರು ಮನೆಯಲ್ಲಿ ನಿಧನರಾದರು. ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷೆ ಸುಜಾತಾ, ಮಾಜಿ ಅಧ್ಯಕ್ಷ ಇಬ್ರಾಹಿಂ ಕೆ., ಬಾಲಕೃಷ್ಣ ಆಳ್ವ ಹಾಗೂ ರಮಣಿ, ಮಾಜಿ ಉಪಾಧ್ಯಕ್ಷೆ ಪ್ರೀತಿ ಲ್ಯಾನ್ಸಿ ಪಿರೇರಾ ಮತ್ತು ಸದಸ್ಯರಾದ ಸೀತಾ ಇವರು ಅಬುಬಕ್ಕರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.