ಮಂಗಳೂರಿನ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ ಕಥೊಲಿಕ್ ಕ್ರಿಶ್ಚಿಯನ್ ಪರವಾಗಿ ಸಲ್ಲಿಸಿದ ದೀಪಾವಳಿ ಶುಭಾಶಯ
ಮಂಗಳೂರು ಧರ್ಮಕ್ಷೇತ್ರದ ಕಥೊಲಿಕ್ ಕ್ರಿಶ್ಚಿಯನ್ ಪರವಾಗಿ ಮಂಗಳೂರು ಧರ್ಮ ಕ್ಷೇತ್ರದ ವತಿಯಿಂದ ಮಂಗಳಾದೇವಿ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ ದೀಪಾವಳಿ ಶುಭಾಶಯಗಳನ್ನು ಸಲ್ಲಿಸಲಾಯಿತು.
ಮಠದ ಸ್ವಾಮಿ ಶ್ರೀ ಜಿತಕಾಮಾನಂದಜಿ ಅವರನ್ನು ಭೇಟಿ ಮಾಡಿದ ಮಂಗಳೂರು ಜೆಪ್ಪು ಸಂತ ಅಂತೋನಿ ಆಶ್ರಮದ ನಿರ್ದೇಶಕರಾದ ಅತೀ ವಂದನೀಯ ಫಾದರ್ ಜೆ.ಬಿ. ಕ್ರಾಸ್ತಾ, ಕಥೊಲಿಕ್ ಸಭಾ ಕೇಂದ್ರೀಯ ಸಮಿತಿಯ ಅಧ್ಯಕ್ಷ ಆಲ್ವೀನ್ ಡಿಸೋಜಾ ಪಾನೀರ್ ಅವರು ಶುಭಾಶಯ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಮಿಥುನ್ ಸಿಕ್ವೇರಾ, ಬಸವರಾಜ್, ಉದ್ಯಮಿ ಹಾಗೂ ಸಮಾಜ ಸೇವಕ ದಿಲ್ ರಾಜ್ ಆಳ್ವ, ಆಶ್ರಮದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀ ರಂಜನ್ ಮೊದಲಾದವರು ಉಪಸ್ಥಿತರಿದ್ದರು.