ಸೂರಿಕುಮೇರುನಲ್ಲಿ ಕಳ್ಳತನ – ಏನೂ ಸಿಗದೇ ಸೈಕಲ್ ಕದ್ದ ಕಳ್ಳರು
ಪರಿಸ್ಥಿತಿ ಬಹಳ ಅಪಾಯಕಾರಿಯಾಗಿದೆ. ಕಳ್ಳತನ ದಿನಂಪ್ರತಿ ಹೆಚ್ಚುತ್ತಿದೆ. ಯಾರೂ ಮನೆಬಿಟ್ಟು ಹೋಗುವಂತೆಯೂ ಇಲ್ಲ. ಮನೆಯಲ್ಲೇ ಇದ್ದರೂ ನೆಮ್ಮದಿಯಿಂದ ನಿದ್ರಿಸುವಂತೆಯೂ ಇಲ್ಲ. ಈ ಗಾಂಜಾ ವ್ಯಸನಿಗಳು ಹಗಲಿಡೀ ಶೋಕಿ ಜೀವನ ಮಾಡುವುದು ಮಧ್ಯರಾತ್ರಿ ವೇಳೆ ಕಳ್ಳತನ ನಡೆಸುವುದು. ಯಾರಿಗೂ ನೆಮ್ಮದಿ ಇಲ್ಲದ ಭಯಭೀತ ವಾತಾವರಣ ನಿರ್ಮಾಣವಾಗಿದೆ ಪೋಲಿಸ್ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ.

ನವೆಂಬರ್ 6ರಂದು ಬುಧವಾರ ಸೂರಿಕುಮೇರು ಕಾಯರಡ್ಕ ಎಂಬಲ್ಲಿ ಮನೆಯೊಂದರ ಹೊರಗಡೆ ಇದ್ದ ಮಕ್ಕಳ ಸೈಕಲ್ ಬೆಳಗ್ಗೆ 4 ಗಂಟೆಯ ವೇಳೆಗೆ ಕಳ್ಳತನ ಮಾಡಲಾಗಿದೆ. ಕಳ್ಳರು ಎಷ್ಟೊಂದು ಗತಿಗೆಟ್ಟವರು ನೋಡಿ! ಮಕ್ಕಳ ಸೈಕಲ್ ಕದಿಯುವ ಹೇಯ ಕೃತ್ಯಕ್ಕೆ ಮುಂದಾಗುತ್ತಾರೆಂದರೆ, ಬೆಳಿಗ್ಗೆ 4.50 ರ ವೇಳೆಗೆ ಮಸೀದಿಗೆ ನಮಾಝಿಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮುಂದೆ ಕಪ್ಪು ಬಣ್ಣದ KA19 HP7273 ಎಂಬ ದ್ವಿಚಕ್ರ ವಾಹನದಲ್ಲಿ ಮಾಣಿ ಕಡೆ ಮೂವರು ಸಣ್ಣ ಪ್ರಾಯದ ಯುವಕರು ಮಧ್ಯ ಕೂತವನ ಮಡಿಲಲ್ಲಿ ಸೈಕಲ್ ಇತ್ತು. ಇವರು ಈ ಬೆಳ್ಳಂ ಬೆಳಗ್ಗೆ ಸೈಕಲ್ ಹಿಡಿದುಕೊಂಡು ಎಲ್ಲಿಗೆ ಹೋಗುವುದು ಎಂದು ಸಂಶಯ ಬಂದಿತ್ತಾದರೂ ಈ ಸೈಕಲ್ ಯಾರು ಕದಿಯುತ್ತಾರೆ ಎಂದು ಗಂಭೀರವಾಗಿ ಪರಿಗಣಿಸದೆ ಅವರು ನಮಾಝಿಗೆ ಹೋದರು. ಕೆಲ ತಾಸುಗಳ ಬಳಿಕ ಸೂರಿಕುಮೇರುವಿನಲ್ಲಿ ಕಳ್ಳತನ ನಡೆದಿದೆ ಏನೂ ಸಿಗದೇ ಇರುವುದಕ್ಕೆ ಮಕ್ಕಳ ಸೈಕಲ್ ಕೊಂಡೋಗಿದ್ದಾರೆ ಎಂದು ತಿಳಿಯಿತು. ಬೆಳಗ್ಗೆ ನಾಲ್ಕು ಗಂಟೆಯ ವೇಳೆ ಮೂವರು ಆಕ್ಟೀವಾದಲ್ಲಿ ಸೈಕಲ್ ಕೊಂಡೊಯ್ಯುವಾಗ ಸಂಶಯ ಗೊಂಡ ಪಿಕಪ್ ವಾಹನದವರು ಫೋಟೋ ತೆಗೆದಿದ್ದರು ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟರು. ಜಿಲ್ಲೆಯಲ್ಲಿ ಇತ್ತೀಚೆಗೆ ವಿಪರೀತ ಕಳ್ಳತನ ಹೆಚ್ಚುತ್ತಿದ್ದು ರಾತ್ರಿ ವೇಳೆ ನಿದ್ರೆ ಬಿಟ್ಟು ಸುತ್ತಾಡುವ ಗಾಂಜಾ ವ್ಯಸನಿಗಳ ಬಗ್ಗೆ ಪೊಲೀಸರ ಕಣ್ಗಾವಲು ಇರಲಿ.



