ಶಾಂತಿಅಂಗಡಿ ನುಸುರತ್ ಮಿಲಾದುನ್ನಭೀ ಸಂಘ ಶಾಂತಿಅಂಗಡಿ ಇದರ 32ನೇ ವಾರ್ಷಿಕ ಮಹಾ ಸಭೆ – ಅಧ್ಯಕ್ಷರಾಗಿ ಇಸ್ಮಾಯಿಲ್ ಪಲ್ಲ

ಬಂಟ್ವಾಳ : ನುಸುರತ್ ಮಿಲಾದುನ್ನಭೀ ಸಂಘ ಶಾಂತಿಅಂಗಡಿ ಇದರ ನೂತನ ಅಧ್ಯಕ್ಷರಾಗಿ ಇಸ್ಮಾಯಿಲ್ ಪಲ್ಲ ಆಯ್ಕೆಯಾದರು. ಮಿತ್ತಬೈಲ್ ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಕೆ.ಎಂ. ಅಬ್ಬಾಸ್ ಫೈಝಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ 32ನೇ ವಾರ್ಷಿಕ ಮಹಾ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಗೌರವಾಧ್ಯಕ್ಷರಾಗಿ ಮುಹಮ್ಮದ್ ಮಜಲ್, ಉಪಾಧ್ಯಕ್ಷರುಗಳಾಗಿ ಸಮದ್ ಕೈಕಂಬ, ಸಾಧಿಖ್ ತಾಳಿಪಡ್ಪು, ಪಧಾನ ಕಾರ್ಯದರ್ಶಿಯಾಗಿ ಅಶ್ರಫ್ ಎಸ್. ಶಾಂತಿಅಂಗಡಿ, ಜೊತೆ ಕಾರ್ಯದರ್ಶಿಗಳಾಗಿ ಆದಂ ಎಸ್.ಕೆ., ಶಾಹುಲ್ ಅದ್ದೇಡಿ, ಲೆಕ್ಕ ಪರಿಶೋಧಕರಾಗಿ ಆದಂ ಪಲ್ಲ, ಕೋಶಧಿಕಾರಿಯಾಗಿ ಹನೀಫ್ ಪಿತ್ತ್ ಲ್ ಶಾಂತಿ ಅಂಗಡಿ, ಸಂಘಟನಾ ಕಾರ್ಯದರ್ಶಿಯಾಗಿ ಅಹಮದ್ ಬಾವ ನಂದರ ಬೆಟ್ಟು ಇವರುಗಳನ್ನು ಆಯ್ಕೆ ಮಾಡಲಾಯಿತು. ಅಶ್ರಫ್ ಎಸ್. ಸ್ವಾಗತಿಸಿ, ಇಸ್ಮಾಯಿಲ್ ಶಾಂತಿಅಂಗಡಿ ವಂದಿಸಿದರು.