ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ನವೀಕೃತ ಯುನಿವರ್ಸಲ್ ಮೆಲೋಡಿಯಸ್ ಆಡಿಯೋ ವಿಡಿಯೋ ಮತ್ತು ಸ್ಟುಡಿಯೋ ಉದ್ಘಾಟನೆ
ಸ್ಟ್ಯಾನ್ಲಿ ಬಂಟ್ವಾಳ್ ಮತ್ತು ಲಿಯೋ ರಾಣಿಪುರ ಇವರ ಜಂಟಿ ಮಾಲಕತ್ವದಲ್ಲಿ ನವೀಕೃತಗೊಂಡ ಅನ್ವಿತಾ ಫೋಟೋಗ್ರಾಫಿ ಮತ್ತು ಆನ್ಸಿಟಾ ವಿಡಿಯೋಗ್ರಾಫಿ ಸ್ಟುಡಿಯೋ ಹಾಗೂ ಯುನಿವರ್ಸಲ್ ಮೆಲೋಡಿಯಸ್ ಆಡಿಯೋ ವಿಡಿಯೋ ಸ್ಟುಡಿಯೋ ಮಂಗಳೂರಿನ ಬಿಕರ್ನಕಟ್ಟೆ ಜಂಕ್ಷನ್ ನಲ್ಲಿ ನವೆಂಬರ್ 6ರಂದು ಬುಧವಾರ ಉದ್ಘಾಟನೆಗೊಂಡಿತು. ಎನ್.ಆರ್.ಐ. ಉದ್ಯಮಿ ಮತ್ತು ಸಾಮಾಜಿಕ ಚಿಂತಕ ಮೈಕಲ್ ಡಿಸೋಜಾ ಇವರು ಅನ್ವಿತಾ ಫೋಟೋಗ್ರಾಫಿ ಮತ್ತು ಆನ್ಸಿಟಾ ವಿಡಿಯೋಗ್ರಾಫಿ ಸ್ಟುಡಿಯೋವನ್ನು ಉದ್ಘಾಟಿಸಿದರು ಹಾಗೂ ಇನ್ನೋರ್ವ ಎನ್.ಆರ್.ಐ. ಉದ್ಯಮಿ ಮತ್ತು ಸಾಮಾಜಿಕ ಚಿಂತಕ ಜೇಮ್ಸ್ ಮೆಂಡೋನ್ಸಾ ಯುನಿವರ್ಸಲ್ ಮೆಲೋಡಿಯಸ್ ಆಡಿಯೋ ವಿಡಿಯೋ ಸ್ಟುಡಿಯೋವನ್ನು ಉದ್ಘಾಟಿಸಿದರು. ಉದ್ಘಾಟನೆ ಬಳಿಕ ವಂದನೀಯ ಫಾದರ್ ವಾಲ್ಟರ್ ಡಿಸೋಜಾ OCD ಇವರು ಆಶೀರ್ವಚನವನ್ನು ನಡೆಸಿ ಇಬ್ಬರೂ ಮ್ಹಾಲಕರಿಗೆ ಶುಭ ಹಾರೈಸಿದರು.
ಇದೇ ವೇಳೆ ಲಿಯೋ ರಾಣಿಪುರರವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಚಟುವಟಿಕೆಗಳನ್ನು ವಿವರಿಸುವ ಕರಪತ್ರವನ್ನು ಉದ್ಘಾಟಿಸಲಾಯಿತು. ಇದನ್ನು ಮಂಗಳೂರು ಧರ್ಮಕ್ಷೇತ್ರದ PRO ಮತ್ತು ಮದರ್ ತೆರೆಸಾ ವಿಚಾರ ವೇದಿಕೆಯ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಇವರು ಬಿಡುಗಡೆ ಮಾಡಿದರು.
ಉದ್ಘಾಟನಾ ಸಮಾರಂಭದಲ್ಲಿ ವಂದನೀಯ ಫಾದರ್ ಡೊಮಿನಿಕ್ ವಾಜ್ – ಧರ್ಮಗುರುಗಳು ಇನ್ಫೆಂಟ್ ಮೇರಿ ಚರ್ಚ್ ಬಜ್ಜೋಡಿ, ಜೊನ್ ಬಿ. ಮೊಂತೇರೊ – ಅಧ್ಯಕ್ಷರು ರಚನಾ ಸಂಸ್ಥೆ ಮಂಗಳೂರು, ರೊನ್ಸ್ ಬಂಟ್ವಾಳ್ – ಅಧ್ಯಕ್ಷರು ಮಹಾರಾಷ್ಟ್ರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ವಂದನೀಯ ಫಾದರ್ ಸುದೀಪ್ ಪಾವ್ಲ್ – ಸಂದೇಶ ಫೌಂಡೇಶನ್ ಬಜ್ಜೋಡಿ, ವಂದನೀಯ ಫಾದರ್ ವಿನ್ಸೆಂಟ್ ಡಿಸೋಜಾ – ಸಿ.ಓ.ಡಿ.ಪಿ. ಸಂಸ್ಥೆ ಮಂಗಳೂರು, ಅನಿಲ್ ಲೋಬೋ – ಅಧ್ಯಕ್ಷರು ಎಂ.ಸಿ.ಸಿ. ಬ್ಯಾಂಕ್, ನವೀನ್ ಲೋಬೋ – ಸದಸ್ಯರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಕಿಶೋರ್ ಫೆರ್ನಾಂಡಿಸ್ – ಮಾಂಡ್ ಸೊಭಾಣ್, ಮ್ಯಾಕ್ಸಿಮ್ ಮೊರಾಸ್ – ಸಾಮಾಜಿಕ ಕಾರ್ಯಕರ್ತ, ಅರುಣ್ ಡಿಸೋಜಾ – ವಲಯ ಅಧ್ಯಕ್ಷರು ಕಥೊಲಿಕ್ ಸಭಾ, ಎ.ಪಿ. ಮೊಂತೇರೊ – ಪ್ರಧಾನ ಕಾರ್ಯದರ್ಶಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಪ್ಲೋಯ್ಡ್ ಕಾಸ್ಸಿಯಾ – ಕಾರ್ಯದರ್ಶಿ ಕೆಎನ್ಎಸ್. ಮಂಗಳೂರು, ಡೋನಾಲ್ಡ್ ಪಿರೇರಾ – ಸಂಪಾದಕರು ಬುಡ್ಕುಲೋ ಮೀಡಿಯಾ ನೆಟ್‌ವರ್ಕ್, ನೋರ್ಬರ್ಟ್ – ನಿರ್ದೇಶಕ ಸಿನಿಕುಡ್ಲಾ, ವಿಲಿಯಂ ರೆಬೆಲ್ಲೋ – ಉದ್ಯಮಿ ಮತ್ತು ಅಕ್ಷತಾ ಜೈನ್ – ಕಟ್ಟಡದ ಮ್ಹಾಲಿಕೆ ಮುಂತಾದ ಗಣ್ಯರು ಭಾಗವಹಿಸಿದ್ದರು.
ಈ ಸ್ಟುಡಿಯೋದ ವಿಶೇಷತೆ ಏನೆಂದರೆ, ಯುವ ಪ್ರತಿಭೆಗಳನ್ನು ಬೆಂಬಲಿಸುವುದರೊಂದಿಗೆ ಕೊಂಕಣಿ ಭಾಷೆಯನ್ನು ಉತ್ತೇಜಿಸುವಲ್ಲಿ ಮಹತ್ವಪೂರ್ಣ ಪಾತ್ರ ವಹಿಸುವುದಕ್ಕೆ ಹೊಸ ವೇದಿಕೆಯನ್ನು ಒದಗಿಸುವುದು ಹಾಗೂ ಸೃಜನಶೀಲತೆ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗೆ ಇದು ಹೊಸ ಆಯಾಮವನ್ನು ನೀಡುವುದಾಗಿದೆ. ರೋಷನ್ ಕ್ರಾಸ್ತಾ ಕಾರ್ಯಕ್ರಮವನ್ನು ನಿರ್ವಹಿಸಿದರು. ಮ್ಹಾಲಕರಾದ ಸ್ಟ್ಯಾನ್ಲಿ ಬಂಟ್ವಾಳ್ ಮತ್ತು ಲಿಯೋ ರಾಣಿಪುರ ಅವರು ನೆರೆದವರಿಗೆ ತಮ್ಮ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು.