ನೆಲ್ಯಾಡಿ ಬಳಿ ಜಮೀನು ವಿವಾದ – ಕೊಲೆಯಲ್ಲಿ ಅಂತ್ಯ

ನೆಲ್ಯಾಡಿ ಬಳಿ ಅಲಂತಾಯ ಗ್ರಾಮದ ಪೆರ್ಲ ನಿವಾಸಿ ಪ್ರಗತಿಪರ ಕೃಷಿಕ 51 ವರ್ಷದ ರಮೇಶ ಗೌಡ ಕೊಲೆಯಾದ ದುರ್ದೈವಿ. ಹತ್ತಿರದ ಸಂಬಂಧಿಕನಾದ ಹರೀಶ್ ಕೊಲೆಗೈದ ಆರೋಪಿ.
ಇಂದು ನವಂಬರ್ 8ರಂದು ರಾತ್ರಿ 7 ಗಂಟೆಯ ಸುಮಾರಿಗೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ರಮೇಶ ಗೌಡ ಮತ್ತು ಸಂಬಂಧಿ ಹರೀಶ್ ಮಧ್ಯೆ ಪರಸ್ಪರ ಮಾತಿನ ಚಕಮಕಿ ನಡೆದಾಗ ಹರೀಶ್ ಕತ್ತಿಯಿಂದ ಕಡಿದು ಹತ್ಯೆಗೈದನೆಂಬ ಮಾಹಿತಿ ಲಭ್ಯವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿದ್ದು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.