ಮಹಿಳೆಯರ ಬಟ್ಟೆ ಅಳತೆ ಪುರುಷ ಟೈಲರ್ ತೆಗೆಯೋ ಹಾಗಿಲ್ಲ..!
ಲಕ್ನೋ: ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ಮಹಿಳಾ ಆಯೋಗವು ಪ್ರಮುಖ ಮಾರ್ಗಸೂಚಿಗಳನ್ನು ಪ್ರಸ್ತಾಪಿಸಿದೆ. ಅದರ ಅಡಿಯಲ್ಲಿ ಪುರುಷ ಟೈಲರ್‌ಗಳು ಮಹಿಳೆಯರ ಬಟ್ಟೆಗಳ ಅಳತೆಗಳನ್ನು ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ.
ಉತ್ತರ ಪ್ರದೇಶ ರಾಜ್ಯದಲ್ಲಿ ಇಂತಹುದೊಂದು ಮಹತ್ವದ ಆದೇಶ ತರಲಾಗಿದ್ದು, ಬೊಟಿಕ್ ಸೆಂಟರ್‌ಗಳಲ್ಲಿ ಮಹಿಳೆಯರ ಬಟ್ಟೆಗಳ ಅಳತೆಯನ್ನು ಪುರುಷರ ಬದಲಿಗೆ ಮಹಿಳೆಯರೇ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಈ ಸಂಬಂಧ ಎಲ್ಲ ಜಿಲ್ಲೆಗಳಿಗೂ ಆದೇಶ ಹೊರಡಿಸಲಾಗಿದೆ.
ಮಹಿಳಾ ಆಯೋಗದ ಮಾರ್ಗಸೂಚಿಗಳ ಪ್ರಕಾರ, ಬೊಟಿಕ್ ಸೆಂಟರ್‌ಗಳಲ್ಲಿ ಮಹಿಳೆಯರ ಬಟ್ಟೆಗಳ ಅಳತೆಯನ್ನು ಪುರುಷರ ಬದಲಿಗೆ ಮಹಿಳೆಯರೇ ತೆಗೆದುಕೊಳ್ಳುತ್ತಾರೆ. ಇದರೊಂದಿಗೆ ಜಿಮ್‌ಗೆ ಸಂಬಂಧಿಸಿದಂತೆ ಇದೇ ರೀತಿಯ ನಿಯಮಗಳನ್ನು ನಿಗದಿಪಡಿಸಲಾಗಿದೆ. ಜಿಮ್ ನಿರ್ವಾಹಕರು ಮಹಿಳೆಯರಿಗೆ ಮಹಿಳಾ ತರಬೇತುದಾರರನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಇಷ್ಟು ಮಾತ್ರವಲ್ಲದೇ ಅಂಗಡಿಯಲ್ಲಿ ಸಿಸಿಟಿವಿ ಅಳವಡಿಸಬೇಕು. ಮಹಿಳೆಯರಿಗಾಗಿ ವಿಶೇಷ ಬಟ್ಟೆಗಳನ್ನು ಮಾರಾಟ ಮಾಡುವ ಮಳಿಗೆಗಳು ಗ್ರಾಹಕರಿಗೆ ಸಹಾಯ ಮಾಡಲು ಮಹಿಳಾ ಉದ್ಯೋಗಿಗಳನ್ನು ನೇಮಿಸಬೇಕಾಗುತ್ತದೆ. ಕೋಚಿಂಗ್ ಸೆಂಟರ್‌ನಲ್ಲಿಯೂ ಮಹಿಳೆಯರಿಗೆ ಸಿಸಿಟಿವಿ ಮತ್ತು ಶೌಚಾಲಯಗಳನ್ನು ಹೊಂದಿರುವುದು ಅವಶ್ಯಕ. ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶ ರಾಜ್ಯದ ಮಹಿಳಾ ಆಯೋಗವು ಇಂತಹ ಪ್ರಮುಖ ಮಾರ್ಗಸೂಚಿಗಳನ್ನು ಪ್ರಸ್ತಾಪಿಸಿದೆ.