ಮೀನಾ ಟೆಲ್ಲಿಸ್ ಇವರಿಗೆ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಸನ್ಮಾನ

ಇತ್ತೀಚಿಗೆ ಮಂಗಳೂರು ನಗರದ ಪದವು ಶಕ್ತಿನಗರ ವಾರ್ಡ್ ನಲ್ಲಿ ಕಳ್ಳರನ್ನು ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಮೀನಾ ಟೆಲ್ಲಿಸ್ ಅವರನ್ನು ಮಂಗಳೂರು ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ನವಂಬರ್ 7ರಂದು ಗುರುವಾರ ಕಾಂಗ್ರೆಸ್ ಭವನದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರು ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ರೂಪಾ ಚೇತನ್, ಮನಪಾ ಸದಸ್ಯೆ ತನ್ವೀರ್ ಶ್ಹಾ, ಮಹಿಳಾ ಕಾಂಗ್ರೆಸ್ ಮುಖಂಡರಾದ ಕಿರಣ ಜೇಮ್ಸ್, ಶಾಂತಿ ಅಮ್ಮಣ್ಣ, ಚಂದ್ರಕಲಾ ರಾವ್, ಮಮತಾ ಶೆಟ್ಟಿ, ಮೇರಿ ಪಿಂಟೋ, ಜೋಯ್ಲಿನ್ ಪ್ರಿಯಾ ಅಂದ್ರಾದೆ, ನ್ಯಾನ್ಸಿ ನೊರೋನ್ಹಾ, ಹಸೀನಾ, ಮೇರಿ ಸಾಂತಿಸ್, ವಿಕ್ಟೋರಿಯಾ ಅಮ್ಮಣ್ಣ, ಕುಸುಮ ಬಂಗೇರಾ, ಬೆನೆಡಿಕ್ಟಾ ಡಿಸೋಜ, ಶಾಂತಲಾ ಗಟ್ಟಿ, ವಿನಯಶ್ರೀ, ಬಬಿತಾ ಹಾಗೂ ಚಿತ್ರಾಕ್ಷಿ ಎನ್. ಉಪಸ್ಥಿತರಿದ್ದರು.