UPI ಬಳಕೆದಾರರು ಇಂಟರ್ ನೆಟ್ ಇಲ್ಲದೆಯೂ ಹಣ ಕಳುಹಿಸಬಹುದು!
UPI ಬಳಕೆದಾರರಿಗೆ ಆರ್.ಬಿ.ಐ. ಶುಭ ಸುದ್ದಿ ನೀಡಿದ್ದು ಇನ್ನು ಮುಂದೆ ಇಂಟರ್ ನೆಟ್ ಸೌಲಭ್ಯ ಇಲ್ಲದೆಯೂ ಹಣ ಪಾವತಿ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ.
ಸ್ಮಾರ್ಟ್ ಫೋನ್ ಹೊಂದಿಲ್ಲದಿದ್ದರೆ ಮತ್ತು ನೀವು UPI ಪಾವತಿಯನ್ನು ಮಾಡಲು ಬಯಸಿದರೆ, ಇಂಟರ್ ನೆಟ್ ಇಲ್ಲದೆಯೂ UPI ಪಾವತಿಯನ್ನು ಮಾಡಬಹುದು. ಆರ್.ಬಿ.ಐ. UPI 123Pay ಮೂಲಕ ಫೀಚರ್ ಫೋನ್ ಮತ್ತು ಸ್ಮಾರ್ಟ್ ಫೋನ್ ಬಳಕೆದಾರರಿಗೆ ಡಿಜಿಟಲ್ ಪಾವತಿಗಳನ್ನು ಇನ್ನಷ್ಟು ಸುಲಭಗೊಳಿಸಿದೆ. ನೀವು ಇಂಟರ್ ನೆಟ್ ಇಲ್ಲದಿದ್ದರೂ UPI 123Pay ಮುಲಕ 10,000 ರೂಪಾಯಿ ತನಕ ವಹಿವಾಟುಗಳನ್ನು ಮಾಡಬಹುದು. ಇಂಟರ್ ನೆಟ್ ಸಂಪರ್ಕವಿಲ್ಲದೆ UPI ಅನ್ನು ಬಳಸುವ ಸ್ಮಾರ್ಟ್ ಫೋನ್ ಅಲ್ಲದ ಬಳಕೆದಾರರಿಗೆ ಅಭಿವೃದ್ಧಿಪಡಿಸಲಾದ ಪರಿಹಾರಗಳಲ್ಲಿ UPI 123Pay ಒಂದಾಗಿದೆ. UPI 123Pay ಅಡಿಯಲ್ಲಿ ವಹಿವಾಟುಗಳಿಗೆ ಯಾವುದೇ ಶುಲ್ಕಗಳಿಲ್ಲ.
ಇಂಟರ್ ನೆಟ್ ಇಲ್ಲದೆ ಪಾವತಿ ಮಾಡುವ ವಿಧಗಳು:
1.ನೀವು ಸ್ಮಾರ್ಟ್ ಫೋನ್ ಹೊಂದಿಲ್ಲದಿದ್ದರೆ, ನೀವು ಇಂಟರ್ ಆ್ಯಕ್ಟಿವ್ ವಾಯ್ಸ್ ರೆಸ್ಪಾನ್ಸ್ (IVR) ಸಹಾಯದಿಂದ ಧ್ವನಿ ಪಾವತಿಯನ್ನು ಸಹ ಮಾಡಬಹುದು. ಇದಕ್ಕಾಗಿ ಅವರು ಗೊತ್ತುಪಡಿಸಿದ IVR ಸಂಖ್ಯೆಗೆ ಕರೆ ಮಾಡಬೇಕು. ನಂತರ ನಿಮ್ಮ ಕೀಪ್ಯಾಡ್ ನಿಂದ ಸರಿಯಾದ ಆಯ್ಕೆಯನ್ನು ಆರಿಸುವ ಮೂಲಕ ನೀವು ಪಾವತಿಯನ್ನು ಮಾಡಬಹುದು.
2.ಮಿಸ್ಡ್ ಕಾಲ್ ಮೂಲಕವೂ ನೀವು ಸುಲಭವಾಗಿ ಪಾವತಿ ಮಾಡಬಹುದು. ಇದಕ್ಕಾಗಿ ನೀವು ಕರೆ ಮಾಡಬೇಕು. ಅದರ ನಂತರ ನೀವು ಮರಳಿ ಕರೆ ಪಡೆಯುತ್ತೀರಿ. ಈ ಕರೆಯಲ್ಲಿ ನಿಮ್ಮ UPI ಪಿನ್ ನಮೂದಿಸುವ ಮೂಲಕ ನೀವು ವಹಿವಾಟನ್ನು ದೃಢೀಕರಿಸಬಹುದು.
3.ನೀವು ಸಾಮೀಪ್ಯ ಧ್ವನಿ ಆಧಾರಿತ ಪಾವತಿಯನ್ನು ಮಾಡಬಹುದು. ಇದರ ಅಡಿಯಲ್ಲಿ ನೀವು ವಿಶೇಷ ಟೋನ್ ಮೂಲಕ ಪಾವತಿ ಮಾಡಬಹುದು. ಇದು ನಿಮ್ಮ ಫೋನ್ ಗೆ ಹತ್ತಿರದ ಸಾಧನದಿಂದ (POD) ಬರುತ್ತದೆ ಮತ್ತು ಈ ಸಾಧನದಲ್ಲಿ ನಿಮ್ಮ ಫೋನ್ ಅನ್ನು ಟ್ಯಾಪ್ ಮಾಡುವ ಮೂಲಕ ನ್ವು ಪಾವತಿ ಮಾಡಬಹುದು.
4.ಅದೇ ಸಮಯದಲ್ಲಿ ನೀವು ಇಂಟರ್ ನೆಟ್ ಇಲ್ಲದೆ ನಿಮ್ಮ ಫೋನ್ ನಲ್ಲಿ ಆ್ಯಪ್ಲಿಕೇಷನ್ ಮೂಲಕ UPI ಪಾವತಿಯನ್ನು ಮಾಡಬಹುದು. ಆದರೆ, ನಾಲ್ಕನೇ ಆಯ್ಕೆಯು ಫೀಚರ್ ಫೋನ್ ಬಳಕೆದಾರರಿಗೆ ಆಗಿದೆ. ನಿಮ್ಮ ಫೀಚರ್ ಫೋನ್ ನಲ್ಲಿರುವ ಆ್ಯಪ್ಲಿಕೇಷನ್ ಮೂಲಕ ನೀವು UPI ಪಾವತಿಯನ್ನು ಮಾಡಬಹುದು.