ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಾಮದಪದವು ಸರಕಾರಿ ಕಾಲೇಜಿನ ಪ್ರೌಢಶಾಲಾ ವಿಭಾಗದ ಹತ್ತನೇ ತರಗತಿ ಮಕ್ಕಳಿಗೆ ಉಚಿತ ಟ್ಯೂಷನ್ ತರಗತಿ ಪ್ರಾರಂಭ
ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಬಂಟ್ವಳ ಇದರ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಬಂಟ್ವಾಳ ತಾಲೂಕಿನ ವಾಮದಪದವು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಎಸ್.ಎಸ್.ಎಲ್.ಸಿ. ಮಕ್ಕಳಿಗೆ ಟ್ಯೂಷನ್ ತರಗತಿಯನ್ನು ಆರಂಭಿಸಲಾಯಿತು.
ಜನಜಗೃತಿ ವೇದಿಕೆ ಸದಸ್ಯರಾದ ನವೀನ್ ಚಂದ್ರಶೆಟ್ಟಿ ಯವರು ತರಗತಿಯನ್ನು ಉದ್ಘಾಟಿಸಿ ಗ್ರಾಮಾಭಿವೃದ್ಧಿ ಯೋಜನೆಯ ಹಲವಾರು ಕಾರ್ಯಕ್ರಮಗಳು ರಾಜ್ಯದ್ಯಾನಂತ ಉತ್ತಮವಾಗಿ ನಡೆಯುತ್ತಿದೆ. ಅದರಲ್ಲೂ ಮಕ್ಕಳ ಶಿಕ್ಷಕನಕ್ಕಾಗಿ ಹಲವಾರು ಕಾರ್ಯಕ್ರಮಗಳಿದ್ದು ಮಕ್ಕಳ ಮುಂದಿನ ಭವಿಷ್ಯ ಕ್ಕೆ ಎಸ್.ಎಸ್.ಎಲ್.ಸಿ. ಅಂಕ ಮುಖ್ಯವಾಗಿರುತದೆ ಅದಕ್ಕೋಸ್ಕರ ಉಚಿತವಾಗಿ ಟ್ಯೂಷನ್ ತರಗತಿಗಳನ್ನು ಪ್ರಾರಂಭಿಸಲಾಗಿದೆ ಇದರ ಸದುಪಯೋಗವನ್ನು ಮಕ್ಕಳು ಪಡೆದು ಕೊಂಡು ಬರುವ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆ ಆಗಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾoಶುಪಾಲ ಬಾಲಕೃಷ್ಣ ಎಲ್., ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಒಕ್ಕೂಟ ಅಧ್ಯಕ್ಷ ಅನಿತ ಪ್ರಭು, ಜ್ಞಾನವಿಕಾಸ ಸಂಯೋಜಕಿ ಗುಣವತಿ, ವಲಯ ಮೇಲ್ವಿಚಾರಕಿ ಸವಿತಾ, ಸೇವಾಪ್ರತಿನಿಧಿ ಮೋಹನ್ ದಾಸ್ ಭಾರತಿ, ಶಿಕ್ಷಕರಾದ ಸುಧಾಕರ್, ಅಮೃತ, ಮಮತಾ, ಶಾಂತಲಾ, ಶ್ರೀಲತಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರಾಧಾಕೃಷ್ಣ ಸ್ವಾಗತಿಸಿ, ಜಗದೀಶ್ ವಂದಿಸಿ, ಜ್ಞಾನ ವಿಕಾಸ ಸಮನ್ವಯಧಿಕಾರಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು.