‘ಕಾಸ್ಕ್’ ಸಂಸ್ಥೆಯಿಂದ ಮದರ್ ತೆರೇಸಾ ಹೋಮ್ ಫಳ್ನೀರ್ ಇಲ್ಲಿ ಆರೋಗ್ಯ ತಪಾಸಣಾ ಶಿಬಿರ
ಕ್ಯಾಥೋಲಿಕ್ ಅಸೋಸಿಯೇಶನ್ ಆಫ್ ಸೌತ್ ಕೆನರಾ ‘ಕಾಸ್ಕ್’ ಸಂಸ್ಥೆಯಿಂದ ಆರೋಗ್ಯ ತಪಾಸಣಾ ಶಿಬಿರವು ನವೆಂಬರ್ 10ರಂದು ಜರಗಿತು. ಈ ಕಾರ್ಯಕ್ರಮವು ಮಂಗಳೂರಿನ ಫಳ್ನೀರ್ ನಲ್ಲಿರುವ ಮದರ್ ತೆರೇಸಾ ಹೋಂನಲ್ಲಿ ಕಣಚೂರು ಆಸ್ಪತ್ರೆಯ ಸಹಯೋಗದಲ್ಲಿ ನಡೆಯಿತು.
‘ಕಾಸ್ಕ್’ಉಪಾಧ್ಯಕ್ಷ ಡಾ. ರೋಹನ್ ಮೋನಿಸ್ ಮತ್ತು ಮಾರ್ಜೋರಿ ಟೆಕ್ಸೇರಾ ಶಿಬಿರದ ನೇತೃತ್ವ ವಹಿಸಿದ್ದರು. ಕಣಚೂರು ವೈದ್ಯಕೀಯ ಕಾಲೇಜಿನ ತಜ್ಞ ವೈದ್ಯರು ಮತ್ತು ಸಿಬ್ಬಂದಿಯ ತಂಡ 48 ಹಿರಿಯ ನಿವಾಸಿಗಳು ಮತ್ತು 13 ಜನ ಸಿಬ್ಬಂದಿಗೆ ವೈದ್ಯಕೀಯ ತಪಾಸಣೆ ಮತ್ತು ಸಮಾಲೋಚನೆಗಳನ್ನು ನೀಡಿತು. ಇದರ ಜೊತೆಗೆ ಶಿಬಿರದಲ್ಲಿನ ಎಲ್ಲಾ ಶಿಬಿರಾರ್ಥಿಗಳಿಗೆ ಉಚಿತ ಔಷಧಗಳನ್ನು ನೀಡಲಾಯಿತು. ನಿವಾಸಿಗಳ ಪೈಕಿ ಕೆಲವರಿಗೆ ಕಣ್ಣಿನ ಪೊರೆಯ ಸಮಸ್ಯೆಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಗುರುತಿಸಲಾಯಿತು.
ಕಣಚೂರು ಮೆಡಿಕಲ್ ಕಾಲೇಜಿನ ನಿರ್ದೇಶಕ ಅಬ್ದುಲ್ ರಹಮಾನ್, ‘ಕಾಸ್ಕ್’ ಅಧ್ಯಕ್ಷ ರೋನಾಲ್ಡ್ ಗೋಮ್ಸ್, ಮದರ್ ತೆರೇಸಾ ಹೋಮ್ ಫಳ್ನೀರ್ ಇದರ ಮದರ್ ಸುಪೀರಿಯರ್ ಭಗಿನಿ ಯೇಸು ತೆರೇಸಾ ಸೇರಿದಂತೆ ಗಣ್ಯ ಅತಿಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ‘ಕಾಸ್ಕ್’ ಕೋಶಾಧಿಕಾರಿ ರೊನಾಲ್ಡ್ ಮೆಂಡೊನ್ಸಾ, ಕಾರ್ಯದರ್ಶಿ ಪೀಟರ್ ಪಿಂಟೊ, ಸಮಿತಿ ಸದಸ್ಯರಾದ ಪ್ರೊಫೆಸರ್ ಜೆರಾರ್ಡ್ ಡಿಸೋಜಾ, ಇಯಾನ್ ಲೋಬೊ, ಮಾರ್ಸೆಲ್ ಮೊಂತೇರೊ, ಡಾ. ಹೆನ್ರಿಕ್ ಲೋಬೊ, ಡಾ. ಎರಿಕ್ ಲೋಬೊ, ಸದಸ್ಯರಾದ ಅನಿತಾ ಗೋಮ್ಸ್ ಮತ್ತು ನೀನಾ ಮೊಂತೇರೊ ಉಪಸ್ಥಿತರಿದ್ದರು.