ಅಡಿಕೆ ಮರದಿಂದ ಬಿದ್ದು ಕಾರ್ಮಿಕ ಸಾವು
ಬಂಟ್ವಾಳ : ಪಾಣೆಮಂಗಳೂರು ಸಮೀಪದ ಬೋಳಂಗಡಿಯಲ್ಲಿ ಅಡಿಕೆ ಕೊಯ್ಯುತ್ತಿದ್ದ ಕಾರ್ಮಿಕ ಆಕಸ್ಮಿಕವಾಗಿ ಮರದಿಂದ ಕೆಳಗೆ ಬಿದ್ದು ಮೃತ ಪಟ್ಟ ಘಟನೆ ನವಂಬರ್ 13ರಂದು ನಡೆದಿದೆ. ಬೋಳಂಗಡಿ ಮಜಲು ಮನೆ ನಿವಾಸಿ 44ವರ್ಷ ಪ್ರಾಯದ ಜೋನ್ ಲೋಬೊ ಮೃತ ಕಾರ್ಮಿಕ.
ಬೋಳಂಗಡಿ ಪದ್ಮನಾಭ ಪ್ರಭುಗಳ ತೋಟದಲ್ಲಿ ಅಡಿಕೆ ಕೊಯ್ಯುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದರೂ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ಘೋಷಿಸಿದ್ದಾರೆ. ಮೃತರ ಪತ್ನಿ ಸ್ವಪ್ನಾ ಲೋಬೊ ಅವರ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಜೋನ್ ಲೋಬೊ ಕರಿಂಗಾನ ಅಮ್ಟೂರು ಕ್ರೈಸ್ತ ದೇವಾಲಯದ ಸದಸ್ಯರಾಗಿರುತ್ತಾರೆ.