August 27, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘದ ವಾರ್ಷಿಕೋತ್ಸವ ಪೂರ್ವ ಸಿದ್ಧತಾ ಸಭೆ

ಪುತ್ತೂರು ಬೊಳುವಾರಿನ ಆಂಜನೇಯ ಯಕ್ಷಗಾನ ಕಲಾ ಸೇವಾ ಸಂಘದ 56ನೇ ವಾರ್ಷಿಕೋತ್ಸವ ಮತ್ತು ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವಿಂಶತಿ ವರ್ಷಾಚರಣೆಯನ್ನು ವಿಶಿಷ್ಟವಾಗಿ, ಅರ್ಥಪೂರ್ಣವಾಗಿ ಆಚರಿಸಲು ಪೂರ್ವ ಸಿದ್ಧತಾ ಸಭೆಯು ಪರ್ಲಡ್ಕ ಅಗಸ್ತ್ಯ ನಿವಾಸದಲ್ಲಿ ಜರಗಿತು. ಯಕ್ಷಗಾನ ಸಂಘದ   ಅಧ್ಯಕ್ಷ ಭಾಸ್ಕರ ಬಾರ್ಯ ಅಧ್ಯಕ್ಷತೆ ವಹಿಸಿದ್ದರು.

ತಾಳಮದ್ದಳೆಯಾಗಿ ಉಭಯಸಂಘದ ಸದಸ್ಯರಿಂದ ಋಷಿ ಪತ್ನಿಯರ ಸಂವಾದ ಸರಣಿ, ಹಿರಿಯ ಕಲಾವಿದರ ತಾಳಮದ್ದಳೆ, ಸಭಾ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ  ಸಾಧಕರಿಗೆ ಯಕ್ಷಾಆಂಜನೇಯ ಪ್ರಶಸ್ತಿ, ಮಹಿಳಾ ಭಾಗವತರಿಗೆ ವಿಂಶತಿ ಪ್ರಶಸ್ತಿ ಮತ್ತು ವಿಶೇಷ ಸಾಧಕ ಕಲಾವಿದರೊಬ್ಬರಿಗೆ ಬೆಂಗಳೂರಿನ ಜಸ್ಟಿಸ್. ಜಗನ್ನಾಥ ಶೆಟ್ಟಿ ಮೆಮೊರಿಯಲ್  ಪ್ರಶಸ್ತಿ  ಪ್ರದಾನ ಮಾಡುವ ಬಗ್ಗೆ ಮಾಹಿತಿ ನೀಡಲಾಯಿತು.

ಕಾರ್ಯದರ್ಶಿ ಆನಂದ ಸವಣೂರು ಸಹಕಾರ್ಯದರ್ಶಿ ಅಚ್ಯುತ್ತ ಪಾಂಗಣ್ಣಾಯ, ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ,ದುಗ್ಗಪ್ಪ ಎನ್,ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, ಗುಂಡ್ಯಡ್ಕ ಈಶ್ವರ ಭಟ್, ಗುಡ್ಡಪ್ಪ ಬಲ್ಯ,ಕಿಶೋರಿ ದುಗ್ಗಪ್ಪ, ಹರಿಣಾಕ್ಷಿ ಜೆ ಶೆಟ್ಟಿ,ಪ್ರೇಮಲತಾ ರಾವ್,ಮಾ. ಪರೀಕ್ಷಿತ್ ಭಾಗವಹಿಸಿ ಸೂಕ್ತ ಸಲಹೆಗಳನ್ನು ನೀಡಿದರು. ಭಾರತಿ ರೈ ಅರಿಯಡ್ಕ ಪ್ರಾರ್ಥಿಸಿದರು. ರಂಗನಾಥ ರಾವ್ ಬೊಳುವಾರು ಸ್ವಾಗತಿಸಿ ಗುಡ್ಡಪ್ಪ ಬಲ್ಯ ವಂದಿಸಿದರು.

You may also like

News

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ DAPC ಬಿಷಪ್‌ಗಳು – ಕ್ರೈಸ್ತ ಸಮುದಾಯದ ಬೇಡಿಕೆಗಳ ಕುರಿತು ಮನವಿ

ಡಯಾಸಿಸ್ ಆಫ್ ಆಲ್ ಪ್ರೊಟೆಸ್ಟಂಟ್ ಚರ್ಚಸ್ (DAPC) ನಿಯೋಗವು ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ, ರಾಜ್ಯದ ಪ್ರೊಟೆಸ್ಟಂಟ್, ಪೆಂಟೆಕೋಸ್ಟಲ್ ಹಾಗೂ ಸ್ವತಂತ್ರ ಕ್ರೈಸ್ತ
News

ಮೊಬೈಲ್‌ಗಾಗಿ ಜಗಳ ತಂಗಿಯ ಕೊಲೆ – ಸಹೋದರ ಸ್ಯಾಮ್ಸನ್ ಫ್ರಾನ್ಸಿಸ್ ಕುಟಿನ್ಹಾನಿಗೆ 5 ವರ್ಷ ಜೈಲು!

ಮೊಬೈಲ್ ವಿಚಾರವಾಗಿ ನಡೆದ ಜಗಳದ ವೇಳೆ ಸ್ವಂತ ತಂಗಿಯ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ ಆಕೆಯ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಆರೋಪಿಗೆ ಮಂಗಳೂರು ನ್ಯಾಯಾಲಯ ಶಿಕ್ಷೆ ವಿಧಿಸಿದೆ.

You cannot copy content of this page