April 21, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಿತ್ತಬೈಲ್ : ಮುಹಿಯ್ಯುದ್ದೀನ್ ಮದರಸ ಮೆನೇಜ್ಮೆಂಟ್ ಕಮಿಟಿಗೆ ಪದಾದಿಕಾರಿಗಳ ಆಯ್ಕೆ.

ಬಂಟ್ವಾಳ : ಬಿ.ಸಿ. ರೋಡ್ ಸಮೀಪದ ಮಿತ್ತಬೈಲ್ ಮುಹಿಯ್ಯುದ್ದೀನ್ ಜುಮಾ ಮಸೀದಿ ಇದರ ಅದೀನದ ಮುಹಿಯ್ಯುದ್ದೀನ್ ಮದರಸ ಅಭಿವೃದ್ಧಿ ಸಮಿತಿ ರಚನಾ ಸಭೆಯು ಮಿತ್ತಬೈಲ್ ಮಸೀದಿ ಕಮಿಟಿ ಕಛೇರಿಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಮಿತ್ತಬೈಲ್ ಜಮಾತ್ ಅಧ್ಯಕ್ಷ ಅದ್ದೇಡಿ ಮುಹಮ್ಮದ್ ಮಾತನಾಡಿ, ಮದರಸವನ್ನು ಆದುನಿಕ ತಂತ್ರ ಜ್ಞಾನದೊಂದಿಗೆ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್, ಮಕ್ಕಳ ಪ್ರತಿಭೆಗಳಿಗೆ ಪ್ರೋತ್ಸಾಹ, ಪೋಷಕರ ಹಾಗೂ ಮದರಸ ಅಧ್ಯಾಪಕರಿಗೆ ತರಬೇತಿ ಕಾರ್ಯಕ್ರಮ, ಮದರಸ ಶಿಕ್ಷಣದೊಂದಿಗೆ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ಶಿಬಿರ, ಮಕ್ಕಳಲ್ಲಿ ಸಣ್ಣ ಪ್ರಾಯದಲ್ಲೇ ನಾಯಕತ್ವ ಗುಣವನ್ನು ಅಳವಡಿಸಲು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಕಾರ್ಯಕ್ರಮ, ಹದಿಹರೆಯದ ಸಮಸ್ಯೆ ನಿವಾರಣೆಗೆ ಆಪ್ತ ಸಮಾಲೋಚನೆ ನೀಡುವ ವಿನೂತನ ಪ್ರಯತ್ನದ ಭಾಗವಾಗಿ ಮದರಸ ಅಭಿವೃದ್ಧಿ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದರು.

ನೂತನವಾಗಿ ಅಸ್ತಿತ್ವಕ್ಕೆ ಬಂದ ಮದರಸ ಅಭಿವೃದ್ಧಿ ಕಮಿಟಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಜಮಾತ್ ಪ್ರಧಾನ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ನೆರವೇರಿಸಿದರು. ಅಧ್ಯಕ್ಷರಾಗಿ ಮುಹಮ್ಮದ್ ಅದ್ದೇಡಿ, ಉಪಾಧ್ಯಕ್ಷರುಗಳಾಗಿ ರಝಕ್ ಕಬಕ, ಪಿ.ಎಸ್. ಶರೀಫ್, ಪ್ರಧಾನ ಕಾರ್ಯದರ್ಶಿಯಾಗಿ ಆದಂ ಪಲ್ಲ, ಕಾರ್ಯದರ್ಶಿಯಾಗಿ ಎಸ್.ಎ.ಎಲ್. ಶರೀಫ್, ಕೋಶಾಧಿಕಾರಿಯಾಗಿ ಅಬ್ದುಲ್ ರಹಿಮಾನ್,  ಅಸಿರ್ ಕೂಲ್, ಸಂಘಟನಾ ಕಾರ್ಯದರ್ಶಿಗಳಾಗಿ ಅಶ್ರಫ್ ಪೊನ್ನೋಡಿ, ಶಾಕಿರ್ ಶಾಂತಿಅಂಗಡಿ ಅವರನ್ನು ನೇಮಕ ಮಾಡಲಾಯಿತು. ಸಭೆಯಲ್ಲಿ ಮಿತ್ತಬೈಲ್ ಜಮಾಅತ್ ಉಪಾಧ್ಯಕ್ಷ ಜಮಾಲ್, ಕೋಶಾಧಿಕಾರಿ ಅಬ್ದುಲ್ ರಹ್ಮಾನ್, ಕಾರ್ಯದರ್ಶಿ ಅಶ್ರಫ್ ಶಾಂತಿ ಅಂಗಡಿ ಉಪಸ್ಥಿತರಿದ್ದರು.

You may also like

News

MLC ಐವನ್ ಡಿಸೋಜ ಹಾಗೂ ಕಥೊಲಿಕ್ ಸಭಾ ಕೇಂದ್ರಿಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ರವರಿಂದ ಬಿಷಪ್ಸ್ ಹೌಸ್ ನಲ್ಲಿ ಪೋಪ್ ರವರಿಗೆ ಅಂತಿಮ ನಮನ

ಕ್ರಿಶ್ಚಿಯನ್ನರ ಪರಮೋಚ್ಚ ಜಗದ್ಗುರು ಪೋಪ್ ಫ್ರಾನ್ಸಿಸ್ ರವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಇಂದು ಎಪ್ರಿಲ್ 21ರಂದು ಸೋಮವಾರ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಪೀಟರ್
News

ಜಗದ್ಗುರು ಪೋಪ್ ಫ್ರಾನ್ಸಿಸ್ ಇನ್ನಿಲ್ಲ

ಲ್ಯಾಟಿನ್ ಅಮೆರಿಕದ ಮೊದಲ ಪೋಪ್ ಮತ್ತು ಆಧುನಿಕ ರೋಮನ್ ಕ್ಯಾಥೋಲಿಕ್ ಚರ್ಚ್‌ನಲ್ಲಿ ಪರಿವರ್ತನಾಶೀಲ ವ್ಯಕ್ತಿಯಾಗಿದ್ದ ಜಗದ್ಗುರು ಪೋಪ್ ಫ್ರಾನ್ಸಿಸ್ ಇಂದು ಏಪ್ರಿಲ್ 21ರಂದು ಸೋಮವಾರ ತಮ್ಮ 88

You cannot copy content of this page