ಮಂಗಳೂರಿನ ಮಣ್ಣಾಗುಡ್ಡೆಯ ಶ್ರೀ ಮಡಕೈ ನವದುರ್ಗಾ ಮಹಾಗಣಪತಿ ಕ್ಷೇತ್ರಕ್ಕೆ ಶ್ರೀ ವಿದ್ಯಾಧಿಶ ತೀರ್ಥ ಶ್ರೀಪಾದರ ಭೇಟಿ

ಮಂಗಳೂರಿನ ಮಣ್ಣಾಗುಡ್ಡೆಯ ಶ್ರೀ ಮಡಕೈ ನವದುರ್ಗಾ ಮಹಾಗಣಪತಿ ಕ್ಷೇತ್ರಕ್ಕೆ ನವಂಬರ್ 14ರಂದು ಸಂಜೆ 6:30ಕ್ಕೆ ಶ್ರೀ ಪರ್ಥಗಾಳಿ ಗೋಕರ್ಣ ಮಠಾಧೀಶರಾದ ಶ್ರೀ ವಿದ್ಯಾಧಿಶ ತೀರ್ಥ ಶ್ರೀಪಾದರು ಭೇಟಿ ನೀಡಿ, ಭಕ್ತಾದಿಗಳಿಗೆ ಪ್ರಸಾದ ವಿತರಿಸಿದರು. ಆ ಪ್ರಯುಕ್ತ ದೇವಾಲಯದ ಪರವಾಗಿ ನವದುರ್ಗಾ ಮಹಿಳಾ ಮಂಡಳಿಯ ಸದಸ್ಯರಿಂದ ಪೂರ್ಣಕುಂಭ, ವೇದಘೋಷ, ವಾದ್ಯ ಗೋಷ್ಟಿಗಳೊಂದಿಗೆ ಶ್ರೀ ಯುತರನ್ನು ಸ್ವಾಗತಿಸಲಾಯಿತು.
ದೇವರಭೇಟಿ, ಮಂಗಳಾರತಿ, ಸಭಾಕಾರ್ಯಕ್ರಮ ಹಾಗೂ ಶ್ರೀಗಳಿಗೆ ದೇವಾಲಯದ ವತಿಯಿಂದ ಪಾದಪೂಜೆ ಜರುಗಿತು. ಸ್ವಾಮೀಜಿಯವರಿಂದ ಆಶೀರ್ವಾಚನ, ಬಂದಂತಹ ಭಕ್ತಭಿಮಾನಿಗಳಿಗೆ ಫಲಮಂತ್ರಕ್ಷತೆ ವಿತರಣಾ ಕಾರ್ಯಕ್ರಮ ಜರುಗಿತು.
ದೇವಸ್ಥಾನದ ಆಡಳಿತ ಮೊಕ್ತೇಸರ ವಿಶ್ವನಾಥ್ ಭಟ್ ರವರು ಸ್ವಾಗತಿಸಿದರು. ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಸದಸ್ಯರಾದ ಸಮರ್ಥ್ ಭಟ್, ನವೀನ್ ಲೋಬೊ, ನವದುರ್ಗಾ ಮಹಿಳಾ ಮಂಡಳಿಯ ಸದಸ್ಯರು ಹಾಗೂ ನೂರಾರು ಮಂದಿ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ದೇವಸ್ಥಾನ ಪ್ರಧಾನ ಅರ್ಚಕರಾದ ಶ್ರೀ ಸತೀಶ್ ಭಟ್ ಇವರು ಪ್ರಾಸ್ತವಿಕ ಭಾಷಣವನ್ನು ಮಾಡಿದರು. ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.