ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ಮಾಣಿ ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ

ಮಾಣಿ : ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳ ಮೂಲಕ ಕಳೆದ ಇಪ್ಪತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ಮಾಣಿ ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ನವಂಬರ್ 18ರಂದು ಸೋಮವಾರ ಹಳೀರದಲ್ಲಿ ನಡೆಯಿತು. ಅಬ್ದುಲ್ ಖಾದರ್ ಮಾಣಿ ಇವರ ಅಧ್ಯಕ್ಷತೆಯಲ್ಲಿ ಸಲೀಂ ಮಾಣಿ ಸ್ವಾಗತಿಸಿದರು.
ಕಾರ್ಯದರ್ಶಿ ಸಿದ್ದೀಕ್ ಮಾಣಿ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು. ಬಳಿಕ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಮೂಸಾ ಕರೀಂ ಮಾಣಿ, ಉಪಾಧ್ಯಕ್ಷರಾಗಿ ರಫೀಕ್ ಎಸ್.ಎಸ್. ಕೊಡಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಕಲ್ಲಡ್ಕ, ಜೊತೆ ಕಾರ್ಯದರ್ಶಿಯಾಗಿ ಸಿದ್ದೀಕ್ ಮಾಣಿ, ಕೋಶಾಧಿಕಾರಿಯಾಗಿ ಅಝೀಝ್ ಮಾಣಿ, ಸಾಮಾಜಿಕ ಮತ್ತು ಮಾಧ್ಯಮ ವಿಭಾಗದ ಕಾರ್ಯದರ್ಶಿಯಾಗಿ ಸಲೀಂ ಮಾಣಿ, ಜೊತೆ ಕಾರ್ಯದರ್ಶಿಯಾಗಿ ಬಶೀರ್ ಮಾಣಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಅಬ್ದುಲ್ ಖಾದರ್ ಮಾಣಿ, ರಫೀಕ್ (ಮಾಣಿ) ಪಾಟ್ರಕೋಡಿ, ಇರ್ಶಾದ್ ಪಂತಡ್ಕ ಕೊಡಾಜೆ, ಆಸಿಫ್ ಮಾಣಿ ಇವರನ್ನು ಆಯ್ಕೆ ಮಾಡಲಾಯಿತು. ಪ್ರಮುಖರಾದ ಆದಂ ಮಾಣಿ, ಜಲೀಲ್ ಮಾಣಿ, ತೈಸೀರ್ ಮಾಣಿ, ಶರೀಫ್ ಬರಿಮಾರು, ಇಬ್ರಾಹಿಂ ಮಾಣಿ, ನಝೀರ್ ಮಾಣಿ, ಇರ್ಫಾನ್ ಕೊಡಾಜೆ, ಝಕರಿಯಾ ಮಾಣಿ ಮುಂತಾದವರು ಉಪಸ್ಥಿತರಿದ್ದರು. ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿದರು. ಅಝೀಝ್ ಮಾಣಿ ಧನ್ಯವಾದಗೈದರು.