ಇರ್ವತ್ತೂರು ಮುಹಮ್ಮದ್ ಅಶ್ಹದ್ ರಾಜ್ಯ ಮಟ್ಟಕ್ಕೆ ಆಯ್ಕೆ

ಬಂಟ್ವಾಳ : ಎಸ್.ಜೆ.ಎಂ. ಸುನ್ನಿ ಜಮೀಯ್ಯತ್ತುಲ್ ಮಹಲ್ಲಮೀನ್ ದಕ್ಷಿಣ ಕನ್ನಡ ಈಸ್ಟ್ ನಡೆಸಿರುವ ಪ್ರತಿಭಾ ಸಂಗಮ 2024 ಜಿಲ್ಲಾ ಮಟ್ಟದ ಪ್ರತಿಭಾ ಸಂಗಮ ಕಾರ್ಯಕ್ರಮದಲ್ಲಿ ಪ್ರಾಕ್ಟಿಕಲ್ (ಮಯ್ಯಿತ್ ಪರಿಪಾಲನೆ) ಸ್ಪರ್ಧೆಯಲ್ಲಿ ಮುಹಮ್ಮದ್ ಅಶ್ಹದ್ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರು ಇರ್ವತ್ತೂರು ಪದವಿನ ಬದ್ರಿಯಾ ಜುಮಾ ಮಸೀದಿ ಅಧೀನದ ಮದ್ರಸ ವಿದ್ಯಾರ್ಥಿಯಾಗಿದ್ದು, ಮೂಡುಪಡುಕೋಡಿ ಗ್ರಾಮದ ಕಲಾ ಬಾಗಿಲು, ಅಂಕರ್ಜಾಲ್ ನಿವಾಸಿ ಮುಹಮ್ಮದ್ ರಫೀಕ್, ಅಪ್ಸಾ ದಂಪತಿಗಳ ಪುತ್ರ.