ಕಥೊಲಿಕ್ ಸಭಾ ಸಿಟಿ ವಲಯದಿಂದ ‘ಲಾವ್ದಾತೊ ಸಿ’ ಕಾರ್ಯಕ್ರಮ
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಸಿಟಿ ವಲಯ ಹಾಗೂ ಕೆಲರೈ ಘಟಕ ಸಹಯೋಗದಲ್ಲಿ ನವೆಂಬರ್ 17ರಂದು ಆದಿತ್ಯವಾರ ‘ಲಾವ್ದಾತೊ ಸಿ’ ಗಿಡ ನೆಡುವ ಕಾರ್ಯಕ್ರಮ ಕೆಲರೈ ಚರ್ಚ್ ವಠಾರದಲ್ಲಿ ನಡೆಯಿತು.
ಕೆಲರೈ ಚರ್ಚ್ ವಸತಿ ಧರ್ಮಗುರುಗಳಾದ ವಂದನೀಯ ಫಾದರ್ ರೋಷನ್ ಫೆರ್ನಾಂಡಿಸ್ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸಿಟಿ ವಲಯ ಅಧ್ಯಕ್ಷ ಅರುಣ್ ಡಿಸೋಜ, ಕಾರ್ಯದರ್ಶಿ ಡೋರಾ ಡಿಕುನ್ಹಾ, ನಿಕಟ ಪೂರ್ವ ಅಧ್ಯಕ್ಷ ವಿಲ್ಫ್ರೆಡ್ ಆಲ್ವಾರಿಸ್, ಕೆಲರೈ ಘಟಕದ ಅಧ್ಯಕ್ಷೆ ಡೊಟ್ಟಿ ಬ್ರಾಗ್ಸ್, ಸಿಟಿ ವಲಯದ ಮಾಜಿ ಅಧ್ಯಕ್ಷರು, ಎಲ್ಲಾ ಘಟಕದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.