ಬೋಳಿಯಾರು ಕಾಂಪಾಡಿಯಲ್ಲಿ ಅನ್ಯ ಕೋಮಿನ ಯುವಕನಿಂದ ಮಾನಭಂಗಕ್ಕೆ ಯತ್ನ – ಆರೋಪಿ ಬಂಧನ
ಸ್ಥಳಕ್ಕೆ ಧಾವಿಸಿ ಬಂದ ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್
ಬೋಳಿಯಾರು ಗ್ರಾಮದ ಕಾಂಪಾಡಿ ಎಂಬಲ್ಲಿ ಕ್ರೈಸ್ತ ಯುವತಿಯೊಬ್ಬಳು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೆಲಸಕ್ಕೆ ಹೋಗುವ ಸಮಯದಲ್ಲಿ ಅನ್ಯಕೋಮಿನ ಯುವಕನೊಬ್ಬ ತನ್ನ ದ್ವಿಚಕ್ರ ವಾಹನದಲ್ಲಿ ಬಂದು ಮಾನಭಂಗಕ್ಕೆ ಯತ್ನಿಸಿದ ಘಟನೆ ನವಂಬರ್ 20ರಂದು ನಡೆದಿದೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯುವತಿಯು ಸ್ಥಳೀಯ ಕಥೊಲಿಕ್ ಸಭಾ ಸಂಘಟನೆಗೆ ತಿಳಿಸಿದಾಗ, ಕಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ರವರು ವಲಯ ಅಧ್ಯಕ್ಷ ಡೋಲ್ಫಿ ಡಿಸೋಜ, ಅಮ್ಮೆಂಬಳ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ರೋಬರ್ಟ್ ಡಿಸೊಜ ಮತ್ತು ಕಥೊಲಿಕ್ ಸಭಾದ ನೂರಾರು ಸದಸ್ಯರೊಂದಿಗೆ ದಿಢೀರನೆ ಭೇಟಿ ನೀಡಿ ಪರಿಸ್ಥಿತಿಯನ್ನು ಶಾಂತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿ ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.