ಕೊನೆಗೂ ಕಣ್ಣು ತೆರೆದ ಗುತ್ತಿಗೆದಾರ – ಕಲ್ಲಡ್ಕದಲ್ಲಿ ಸರ್ವೀಸ್ ರಸ್ತೆ ಕಾಂಕ್ರಿಟೀಕರಣ
ರಾಷ್ಟ್ರೀಯ ಹೆದ್ದಾರಿಯಲ್ಲಿ ನೂತನವಾಗಿ ಹಲವು ಕಡೆ ಫ್ಲೈ ಓವರ್ ಗಳು ನಿರ್ಮಾಣವಾಗುತ್ತಿವೆ. ಫ್ಲೈ ಓವರ್ ಇರುವ ಇಕ್ಕೆಲಗಳಲ್ಲಿ ಸರ್ವೀಸ್ ರಸ್ತೆಗಳು ಇರುತ್ತವೆ. ಕಲ್ಲಡ್ಕದಲ್ಲಿ ಫ್ಲೈ ಓವರ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸರ್ವೀಸ್ ರಸ್ತೆಗಳನ್ನು ಸಜ್ಜು ಮಾಡಲಾಗುತ್ತಿದೆ.
ಡಾಂಬರು ಹಾಕುವುದರ ಮೂಲಕ ಒಂದು ಹಂತದ ಕೆಲಸ ಕಾರ್ಯಗಳು ನಡೆದರೆ, ಬಳಿಕ ಕಾಂಕ್ರೀಟ್ ಕಾಮಗಾರಿ ನಡೆಯುತ್ತಾ ಇದೆ. ಫ್ಲೈ ಓವರ್ ಕೆಲಸ ನಡೆಯುವ ಎರಡೂ ಬದಿಯಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದ್ದು, ಕೆಲವು ದಿನಗಳಲ್ಲಿ ಕಲ್ಲಡ್ಕ ಪೇಟೆಯ ಭಾಗದಲ್ಲಿ ಸುಸಜ್ಜಿತ ಸರ್ವೀಸ್ ರಸ್ತೆ ನಿರ್ಮಾಣವಾಗಿ ಸಂಚಾರಕ್ಕೆ ಮುಕ್ತವಾಗಲಿದೆ.