ಅಕ್ರಮ ದಾಸ್ತಾನು ಮಾಡಿದ ಮಧ್ಯವನ್ನು ವಶಪಡಿಸಿದ ಅಬಕಾರಿ ಇಲಾಖೆ

ನವಂಬರ್ 16ರಂದು ಶನಿವಾರ ಮದ್ಯರಾತ್ರಿ ಮಾನ್ಯ ಅಬಕಾರಿ ಜಂಟಿ ಆಯುಕ್ತರು ಜಾರಿ ಮತ್ತು ತನಿಖೆ, ಮಂಗಳೂರು ವಿಭಾಗರವರ ಆದೇಶದಂತೆ, ಅಬಕಾರಿ ಉಪ ಆಯುಕ್ತರು ದಕ್ಷಿಣ ಕನ್ನಡ ಜಿಲ್ಲೆ ಇವರ ನಿರ್ದೇಶನದಂತೆ ಅಬಕಾರಿ ಉಪ ಅಧೀಕ್ಷಕರು ಮಂಗಳೂರು ಉಪ ವಿಭಾಗ 1 ಇವರ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರು, ಮಂಗಳೂರು ಉಪ ವಿಭಾಗ-1, ಅಬಕಾರಿ ಉಪ ನಿರೀಕ್ಷಕರು, ಮಂಗಳೂರು ದಕ್ಷಿಣ ವಲಯ-1, ಅಬಕಾರಿ ಉಪ ನಿರೀಕ್ಷಕರು ಮಂಗಳೂರು ಉಪವಿಭಾಗ 1 ಮತ್ತು ಸಿಬ್ಬಂದಿಯವರೊಂದಿಗೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೊಡಿಯಾಲಬೈಲ್ ಗ್ರಾಮದ ಕಂಬಳಕ್ರಾಸ್ ಬಳಿಯಲ್ಲಿರುವ ಎಸ್.ಎಸ್. ಕಾಂಪೌಂಡ್ ಕಟ್ಟಡದ ಮೊದಲನೆ ಮಹಡಿಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆಯ ವಿರುದ್ದವಾಗಿ 1)ಡಿಫೆನ್ಸ್ ಮದ್ಯ- 19.5 litres, 2) ಗೋವಾ ರಾಜ್ಯದ ಮದ್ಯ- 52.5 litres, 3) ಕರ್ನಾಟಕ ರಾಜ್ಯದ ಮದ್ಯ- 3 litres, 4) ತೆರಿಗೆರಹಿತ ವಿದೇಶ ಮದ್ಯ – 3 litres, 5) ಗೋವಾ ರಾಜ್ಯದ ಬಿಯರ – 21.5 litres, 6) ಕರ್ನಾಟಕ ರಾಜ್ಯದ ಬಿಯರ್-0.33 litres, 7) ಡಿಫೆನ್ಸ ಬಿಯರ್- 1.3 litres, ಒಟ್ಟು: 101.30 litres (IML+BEER) ಯಾವುದೇ ದಾಖಲಾತಿಗಳಿಲ್ಲದೆ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಮಾಡಿದ್ದ ಮಧ್ಯವನ್ನು ವಶಪಡಿಸಿಕೊಂಡಿದ್ದು, ಕರ್ನಾಟಕ ಅಬಕಾರಿ ಕಾಯ್ದೆ 1965 ರ ನಿಯಮ 14, 15ರಂತೆ ಅಪರಾಧವಾಗಿದ್ದು ಕಲಂ 32(1), 38(ಎ) ಮತ್ತು 43(ಎ) ರಂತೆ ಶಿಕ್ಷಾರ್ಹವಾಗಿರುವುದರಿಂದ ಈ ಬಗ್ಗೆ ಒಂದು ಘೋರ ಮೊಕದ್ದಮೆಯನ್ನು ದಾಖಲಿಸಲಾಗಿದ್ದು, ಪ್ರಕರಣದಲ್ಲಿ ಅಮೀತ್ ಎ.ಪಿ. ಎಂಬ ಆರೋಪಿಯು ತಲೆಮರೆಸಿಕೊಂಡಿದ್ದು ತನಿಖೆಯಲ್ಲಿ ಪತ್ತೆಹಚ್ಚಬೇಕಾಗಿರುತ್ತದೆ.