ರಾಜ್ಯ ವಕ್ಪ್ ಸದಸ್ಯರಾಗಿ ಅನ್ವರ್ ಪಾಷಾ ಪುನಾರಾಯ್ಕೆ – ದಕ್ಷಿಣ ಕನ್ನಡ ಜಿಲ್ಲಾ ಮದ್ರಸ ಮೆನೇಜ್ಮೆಂಟ್ ವತಿಯಿಂದ ಅಭಿನಂದನೆ
ಬಂಟ್ವಾಳ : ರಾಜ್ಯ ವಕ್ಪ್ ಸಮಿತಿಯ ಸದಸ್ಯರಾಗಿ ಪುನಾರಾಯ್ಕೆಗೊಂಡ ಅನ್ವರ್ ಪಾಷಾ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಮದ್ರಸ ಮೆನೇಜ್ಮೆಂಟ್ ವತಿಯಿಂದ ಬೆಂಗಳೂರಿನಲ್ಲಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಎಂ.ಎಚ್. ಮ್ಯೊದಿನ್ ಹಾಜಿ ಪ್ರಧಾನ ಕಾರ್ಯದರ್ಶಿ ರಫೀಕ್ ಹಾಜಿ ನೇರಳಕಟ್ಟೆ, ಫರಂಗಿಪೇಟೆ ರೇಂಜ್ ಅಧ್ಯಕ್ಷ ಹಸನಬ್ಬ, ಮೂಡಬಿದ್ರೆ ರೇಂಜ್ ಅಧ್ಯಕ್ಷ ಮುಹಿಯುದ್ದೀನ್, ಮಿತ್ತಬೈಲ್ ರೇಂಜ್ ಅಧ್ಯಕ್ಷ ಯೂಸುಫ್ ಬದ್ರಿಯಾ, ಗುರುಪುರ ರೇಂಜ್ ಅಧ್ಯಕ್ಷ ಶಾಹುಲ್ ಹಮೀದ್ ಹಾಜಿ ಮೆಟ್ರೋ, ಕಡಬ ರೇಂಜ್ ಕಾರ್ಯದರ್ಶಿ ಆಶ್ರಫ್ ಶೇಡಿಗುಂಡಿ, ಆತೂರು ರೇಂಜ್ ಕಾರ್ಯದರ್ಶಿ ಸಿದ್ಧೀಕ್ ನಿರಾಜೆ, ಉಪ್ಪಿನಂಗಡಿ ರೇಂಜ್ ಕಾರ್ಯದರ್ಶಿ ಹಮೀದ್ ಕರಾವಳಿ ಮೊದಲಾದವರು ಉಪಸ್ಥಿತರಿದ್ದರು.